ಪಟ್ಟಿಗೆ ಹಿಂತಿರುಗಿ

ಕಗ್ಗ 787 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಶೀತಾಳೆ ಸಿಡುಬು ಶಿಶುಗಳ ಕುಲುಕಿ ತೆರಳುವುದು । ಪ್ರೀತಿಕಾಮನೆಗಳಷ್ಟಿಷ್ಟು ಬೆಳೆದವರ ॥ ಯಾತನೆಗಳಿಂ ಕುದಿಸಿ ಕುಲುಕಿ ಬಳಿಕಾರುವುವು । ಕಾತರತೆ ಕಳೆಯೆ ಸುಖ - ಮಂಕುತಿಮ್ಮ ॥ ೭೮೭ ॥

shItALe siDubu shishugaLa kuluki teraLuvudu । prIti kAmanegaLu aShTiShTu beLedavara ॥ yAtanegaLim kudisi kuluki baLika aaruvuvu । kAtarate kaLeye sukha - Mankutimma ॥ 787 ॥

ಕನ್ನಡದಲ್ಲಿ ಅರ್ಥ

ಮಕ್ಕಳಿಗೆ ಸಿಡುಬು ಶೀತಾಳೆಗಳಂತಹ ಖಾಯಿಲೆಗಳು ಬಂದು, ಅವರನ್ನು ಒಂದು ಬಾರಿ ನಡುಗಿಸಿ ಮತ್ತೆ ಬಾರದಂತೆ ಹೊರಟು ಹೋಗುತ್ತವೆ. ದೊಡ್ಡವರನ್ನು ಪ್ರೀತಿ, ಆಸೆಗಳಂತಹ ಭಾವಗಳು ಒಂದು ರೋಗದಂತೆ ಹಿಡಿದು ಯಾತನೆಗೊಳಪಡಿಸುತ್ತದೆ. ಕೆಲಕಾಲ ಅಲುಗಾಡಿಸಿ ಮತ್ತೆ ಆರಿಹೋಗುತ್ತವೆ. ಹಾಗಿ ಆರಿ ನಮ್ಮಲ್ಲಿನ ಕಾತರತೆ ಕಡಿಮೆಯಾದರೆ ಅದೇ ಸುಖ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

Chicken pox will rattle a baby bad and leave. Just like that love and other desires will rattle grownup by raking up feelings. Later they subside. When the anxiety ends, it is happiness. - Mankutimma

ವಿಷಯಗಳು

DeathDetachmentLove

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.