ಪಟ್ಟಿಗೆ ಹಿಂತಿರುಗಿ

ಕಗ್ಗ 785 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಕುಂದದೆಂದಿಗುಮೆನ್ನಿಸುವ ಮನದ ಕಾತರತೆ । ಯೆಂದೊ ತಾನೆ ಬಳಲಿ ತಣ್ಣಗಾಗುವುದು ॥ ಮಂದದಾ ಕಾರ್ಮೋಡ ಬಿರಿದು ರವಿ ಬೆಳಗುವನು । ಅಂದಿನಾ ಸುಖವೆ ಸುಖ - ಮಂಕುತಿಮ್ಮ ॥ ೭೮೫ ॥

kundadu endigum ennisuva manada kAtarate । yendo tAne baLali taNNagAguvudu ॥ mandadA kArmODa biridu ravi beLaguvanu । andina aa sukhave sukha - Mankutimma ॥ 785 ॥

ಕನ್ನಡದಲ್ಲಿ ಅರ್ಥ

ದಪ್ಪ ಮತ್ತು ದಟ್ಟವಾದ ಕಾರ್ಮೋಡ, ಮಳೆ ಸುರಿದೋ ಅಥವಾ ಗಾಳಿಯ ಆರ್ಭಟಕ್ಕೋ ಚದುರಿಹೋಗಿ, ಸೂರ್ಯನ ಬೆಳಕು ಮತ್ತೆ ಬೆಳಗುವಂತೆ, ಎಂದಿಗೂ ಕಡಿಮೆಯಾಗುವುದೇ ಇಲ್ಲವೇನೋ ಎನ್ನುವ ಮನಸ್ಸಿನ ಕಳವಳ, ಕಾತರತೆ, ತಾನೇ ತಾನಾಗಿ ಕಡಿಮೆಯಾಗಿ ಮನಸ್ಸಿಗೆ ನಿರಾಳವಾದಾಗ ನಮಗಾಗುವ ಸುಖವೇ, ನಿಜವಾದ ಸುಖ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

It seems as though the anxiety in our minds will never end. But one day, it will go away on its own. Just like a break in the clouds converts a dull cloudy moment into a bright sunny day. That happiness is the real happiness. - Mankutimma

ವಿಷಯಗಳು

DeathMorality

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.