ಪಟ್ಟಿಗೆ ಹಿಂತಿರುಗಿ

ಕಗ್ಗ 173 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಬಂಧುಬಳಗವುಮಂತಕನ ಚಮುವೊ, ಛದ್ಮಚಮು । ದಂದುಗದ ಬಾಗಿನಗಳವರ ನಲುಮೆಗಳು ॥ ಕುಂದಿಪ್ಪುವಾತ್ಮನನವರ್ಗಳುಪಕಾರಗಳು । ಮಂದಿಗಾಗದಿರು ಬಲಿ - ಮಂಕುತಿಮ್ಮ ॥ ೧೭೩ ॥

bandhu baLagavum antakana chamuvu, Chadma chamu । dandugada bAginagaLavara nalumegaLu ॥ kundippuvu Atmananu avargaLa upakAragaLu । mandigAgadiru bali - Mankutimma ॥ 173 ॥

ಕನ್ನಡದಲ್ಲಿ ಅರ್ಥ

ನಮಗಿರುವ ಬಂಧುಗಳು ಮಾರುವೇಷದಲ್ಲಿರುವ ಯಮನ ಸೈನ್ಯದಂತಿರುವರು, ಅವರು ಮಾಡುವ ಉಪಕಾರಗಳು ಮಾತು ಅವರು ನೀಡುವ ಕೊಡುಗೆಗಳು ನಮಗೆ ನೋವುಂಟುಮಾಡಿ ನಮ್ಮ ಆತ್ಮವನ್ನು ಕುಗ್ಗಿಸುತ್ತದೆ. ಹಾಗಾಗಿ ನೀನು ಎಚ್ಚರಿಕೆಯಿಂದ ಇದ್ದು ಈ ಮಂದಿಯ ಉಪಟಳಕ್ಕೆ ಬಲಿಯಾಗದಿರು ಎಂದು ಎಚ್ಚರಿಕೆಯಮಾತನ್ನು ಆಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ .

ಅರ್ಥ ಮತ್ತು ವ್ಯಾಖ್ಯಾನ

"Friends and aquaintences are all soldiers of the destructor (Death). They are not mere soldiers - they are soldiers in disguise. The love they shower on us is nothing but gifts of trouble in disguise. They help they do will put burden on us. You should realise this and avoid being obligated to people." - Mankutimma

ವಿಷಯಗಳು

DeathSufferingSocietyLoveWar

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.