ಪಟ್ಟಿಗೆ ಹಿಂತಿರುಗಿ

ಕಗ್ಗ 172 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಅರಿ ಮಿತ್ರ ಸತಿ ಪುತ್ರ ಬಳಗವದೆಲ್ಲ । ಕರುಮದವತಾರಗಳೊ, ಋಣಲತೆಯ ಚಿಗುರೋ ॥ ಕುರಿಯನಾಗಿಸಿ ನಿನ್ನ ಕಾಪಿಡುವ ಸಂಸಾರ । ವುರಿಮಾರಿಯಾದೀತೊ - ಮಂಕುತಿಮ್ಮ ॥ ೧೭೨ ॥

ari mitra sati putra baLagavadella । karumada avatAragaLo, RuNalateya chigurO ॥ kuriyanAgisi ninna kApiDuva samsAra । vurimAriyAdIto - Mankutimma ॥ 172 ॥

ಕನ್ನಡದಲ್ಲಿ ಅರ್ಥ

ಶತ್ರು, ಮಿತ್ರ, ಹೆಂಡತಿ, ಮಗ-ಮಗಳು, ಬಂಧು, ಬಳಗವೆಲ್ಲ ನಮ್ಮ ಪೂರ್ವ ಕರ್ಮದಿಂದಲೇ ಲಭ್ಯವಾದವು ಅಥವಾ ನಾವು ಉಳಿಸಿಕೊಂಡು ಬಂದ ವಾಸನಾ ಶೇಷವೆಂಬ ಬಳ್ಳಿಯ ಹೊಸ ಹೊಸ ಚಿಗುರುಗಳೋ? ಈ ಸಂಸಾರದಲ್ಲಿ ನಾವು ಗೊತ್ತು ಗುರಿಯಿಲ್ಲದ, ತಲೆ ತಗ್ಗಿಸಿ ನಡೆಯುವ ಕುರಿಗಳಂತೆ ಇರುವಾಗ ಈ ಸಂಸಾರ ಉರಿಮಾರಿಯಾದೀತು ಎಂದು ಒಂದು ಎಚ್ಚರಿಕೆಯ ಭಾವವನ್ನು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸಿದ್ದಾರೆ.

ಅರ್ಥ ಮತ್ತು ವ್ಯಾಖ್ಯಾನ

"Enemies, friends, wife, son and relatives are different forms of karma - consequences of old deeds. They are fresh sprouts of the creeper that represents the ever living debt of consequences. A family that rears the sheep with lot of love can turn tyrrant and offer as sacrifice to the Godess." - Mankutimma

ವಿಷಯಗಳು

DevotionLifeDeathFateSocietyLove

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.