ಪಟ್ಟಿಗೆ ಹಿಂತಿರುಗಿ

ಕಗ್ಗ 174 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ತಂದೆಮಕ್ಕಳಿಗೆ ಹದಗೆಟ್ಟುದನು ಕಾಣೆಯಾ? । ಹೊಂದಿರುವರವರ್ ಅಹಂತೆಯು ಮೊಳೆಯುವನಕ ॥ ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ? । ಬಂಧ ಮುರಿವುದು ಬಳಿಕ - ಮಂಕುತಿಮ್ಮ ॥ ೧೭೪ ॥

tande makkaLige hadageTTudanu kANeyA? । hondiruvaru avar ahanteyu moLeyuvanaka ॥ tandeyAr makkaLAr nAnembudu eddunile? । bandha murivudu baLika - Mankutimma ॥ 174 ॥

ಕನ್ನಡದಲ್ಲಿ ಅರ್ಥ

ತಂದೆ ಮಕ್ಕಳ ಸಂಬಂಧವನ್ನು ಕುರಿತು ಒಂದು ಚೆಂದಾದ ಕಗ್ಗವಿದು. ಇಂದಿನ ಪ್ರಪಂಚದಲ್ಲಿ ತಂದೆಮಕ್ಕಳ ಬಾಂಧವ್ಯದ ರೂಪ ಹದಗೆಟ್ಟು ಹೋಗಿರುವುದನ್ನು ನೋಡಿ. ಈ ಸಂಬಂಧಗಳು ಮಕ್ಕಳಲ್ಲಿ ಅಹಂಕಾರ ಮೊಳೆಯುವತನಕ, ಸರಿ ಸುಮಾರಾಗಿರುತ್ತದೆ. ಹಾಗೆ ಪ್ರತಿಯೊಬ್ಬರ ಮನಸ್ಸಲ್ಲೂ ಅಹಂಕಾರ ಎದ್ದು ನಿಂತರೆ ತಂದೆಯಾರೋ ಮಕ್ಕಳಾರೋ? ಈ ಸಂಬಂಧಗಳ ಬಂಧ ಮುರಿದುಬೀಳುತ್ತದೆ ಎಂದು ಉಲ್ಲೇಖಮಾಡುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"Have you not seen fathers and sons going against each other? They are in total harmony untill they realise their egos. Who is the father or the son - when the word 'I' stands out. All ties break down after that. " - Mankutimma

ವಿಷಯಗಳು

SelfPeace

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.