ಪಟ್ಟಿಗೆ ಹಿಂತಿರುಗಿ

ಕಗ್ಗ 133 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಬಹಿರಂತರಗಳೊಂದು ಭೂತಭವ್ಯಗಳೊಂದು । ಇಹಪರಂಗಳುಮೊಂದು ಚೈತನ್ಯವೊಂದು ॥ ಬಹುಪಾತ್ರನಾಟಕದಿ ಮಾಯೆ ಶತವೇಷಗಳ । ವಹಿಸಲೀವಳು ಪತಿಗೆ - ಮಂಕುತಿಮ್ಮ ॥ ೧೩೩ ॥

bahir antargaLu ondu bhUtabhavyagaLu ondu । iha parangaLum ondu chaitanya ondu ॥ bahupAtranATakadi mAye shataveShagaLa । vahisalu IvaLu patige - Mankutimma ॥ 133 ॥

ಕನ್ನಡದಲ್ಲಿ ಅರ್ಥ

ಒಳಗೂ ಹೊರಗುಗಳು ಒಂದೇ. ಭೂತ ಭವಿತವ್ಯಗಳು ಒಂದೇ. ಇಹ ಪರಗಳು ಒಂದೇ ಏಕೆಂದರೆ ಇವೆಲ್ಲವೂ ಆಗಿರುವುದು , ಆಗುತ್ತಿರುವುದು ಎಲ್ಲವೂ ಒಂದೇ ಚೈತನ್ಯದಿಂದ. ಆದರೆ ಈ ಜಗತ್ತನ್ನು ಆವರಿಸಿರುವ ಮಾಯೆಯೆಂಬ ಮಾಯಾಂಗನೆ ಆ ಚೈತನ್ಯಕ್ಕ್ಕೆ ಹಲವಾರು ರೂಪಗಳನ್ನು ವಹಿಸಲು ಕೊಡುತ್ತಾಳೆ, ಎಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.

ಅರ್ಥ ಮತ್ತು ವ್ಯಾಖ್ಯಾನ

"The 'out' and 'in' are unified into one. The 'past' and 'future' are one and the same. 'Here' and 'there' are the same. Energy is one. In this multi actor drama, Maya (illusion, often referred as wife of the creator) has given hundreds of roles to her husband." - Mankutimma

ವಿಷಯಗಳು

Duty

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.