ಪಟ್ಟಿಗೆ ಹಿಂತಿರುಗಿ

ಕಗ್ಗ 134 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಏಕದಿಂದಲನೇಕ ಮತ್ತನೇಕದಿನೇಕ । ವೀ ಕ್ರಮವೆ ವಿಶ್ವದಂಗಾಂಗಸಂಬಂಧ ॥ ಲೋಕದಲಿ ಜಾತಿಯಲಿ ವ್ಯಕ್ತಿಯಲಿ ಸಂಸ್ಥೆಯಲಿ । ಸಾಕಲ್ಯದರಿವಿರಲಿ - ಮಂಕುತಿಮ್ಮ ॥ ೧೩೪ ॥

EkadindalE aneka matte anekadina Ekavu । ee kramave vishvada angAnga sambandha ॥ lOkadali jAtiyali vyaktiyali samstheyali । sAkalyada arivirali - Mankutimma ॥ 134 ॥

ಕನ್ನಡದಲ್ಲಿ ಅರ್ಥ

ಏಕದಿಂದ ಅನೇಕ ಮತ್ತು ಅನೇಕದಿಂದ ಏಕ. ಇದೆ ಕ್ರಮವೇ ವಿಶ್ವದ ಎಲ್ಲಾ ಅಂಗಗಳ ಸಂಬಂಧ. ಹಾಗಿರುವಾಗ ಲೋಕದಲ್ಲಿ ಜಾತಿಯಲಿ ವ್ಯಕ್ತಿಯಲಿ ಮತ್ತು ಈ ಜಗತ್ತಿನ ಎಲ್ಲ ಸಂಸ್ಥೆಗಳಲ್ಲಿ ಸಕಲದಲ್ಲೂ, ಈ ಒಂದು ವಿಧಿ, ಕ್ರಮ ಅಥವಾ ವ್ಯವಸ್ಥೆ ಇರಬೇಕು ಎಂದು ಮಾನ್ಯ ಗುಂಡಪ್ಪನವರು ಆದೇಶಿಸುತ್ತಿದ್ದಾರೆ, ಈ ಕಗ್ಗದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"It all starts with one. One becomes many. Over time, the many again becomes (merges into) one. This is the order of every thing in this universe - the worlds, the tribes, in a person, in an institution. One must make a note of this. But at all times, we must be aware of the cosmic spirit that is complete and eternal." - Mankutimma

ವಿಷಯಗಳು

LifeNatureWar

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.