ಪಟ್ಟಿಗೆ ಹಿಂತಿರುಗಿ

ಕಗ್ಗ 132 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ರಾಮನುಚ್ಛ್ವಾಸವಲೆದಿರದೆ ರಾವಣನೆಡೆಗೆ? । ರಾಮನುಂ ದಶಕಂಠನೆಲರನುಸಿರಿರನೆ? ॥ ರಾಮರಾವಣರುಸಿರ್ಗಳಿಂದು ನಮ್ಮೊಳಗಿರವೆ? । ಭೂಮಿಯಲಿ ಪೊಸತೇನೊ? - ಮಂಕುತಿಮ್ಮ ॥ ೧೩೨ ॥

rAmana ucChvAsavu aledirade rAvaNaneDege? । rAmanum dashakanThanu elaranu usirirane? ॥ rAmarAvaNara usirgaLu indu nammoLagirave? । bhUmiyali posatEno? - Mankutimma ॥ 132 ॥

ಕನ್ನಡದಲ್ಲಿ ಅರ್ಥ

ರಾಮನು ಉಸಿರಾಡಿದ ಉಸಿರ ರಾವಣ ಉಸಿರಾಡಲಿಲ್ಲವೇ? ಹಾಗೆಯೇ ರಾಮನೂ ಸಹ ರಾವಣನ ಉಸಿರ ಉಸಿರಾಡಿರಬಹುದಲ್ಲವೇ. ಅಂದು ಬೀಸಿದ ಪವನನು ಇಂದೂ ಇರುವುದರಿಂದ ಅಂದು ರಾಮ ರಾವಣರು ಉಸಿರಾಡಿದ ಉಸಿರು ನಮ್ಮೊಳಗೂ ಇರುವಾಗ ಈ ಭೂಮಿಯಲಿ ಹೊಸತು ಯಾವುದು ಎಂದು ಒಂದು ಪ್ರಶ್ನೆ ಎತ್ತುತ್ತಾರೆ ಮಾನ್ಯ ಗುಂಡಪ್ಪನವರು.

ಅರ್ಥ ಮತ್ತು ವ್ಯಾಖ್ಯಾನ

"Would the air exhaled from Rama not wandered near Ravana? Would not Rama have inhaled air exhaled from Ravana? Would the same air breathed by them not be still around during our times? What is new in this earth?" - Mankutimma

ವಿಷಯಗಳು

Nature

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.