Mankutimmana Kagga by D.V. Gundappa
ಜೋಳಿಗೆಯ ಪಿಡಿದು ನೀನೂರಿನೂರಿಗೆ ನಡೆದು । ಹೇಳುತ್ತ ಹಾಡುಗಳ, ಭಾರಗಳ ಮರೆತು ॥ ಬೀಳು ಮೇಲುಗಳೆಣಿಕೆಯಿಂ ಮನವನಲುಗಿಸದೆ । ಬಾಳ ನಡಸುವುದೆಂದೊ?- ಮಂಕುತಿಮ್ಮ ॥ ೯೨೫ ॥
jOLigeya piDidu nInu oorinoorige naDedu । hELutta hADugaLa, bhAragaLa maretu ॥ bILu mElugaLa eNikeyim manavanu alugisade । bALa naDasuvudu endo? - Mankutimma ॥ 925 ॥
ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಒಂದು ವಿರಕ್ತಭಾವದ ಆಶಯವನ್ನು ಹೊತ್ತು, ತಮಗೆ ತಾವೇ, "ನೀನು, ಕಷ್ಟ ಸುಖಗಳ ಗೆರೆಯನ್ನು ದಾಟಿದ ಮನಸ್ಸನ್ನು ಹೊಂದಿದ ಜೋಗಿಯಂತೆ, ಜೋಳಿಗೆಯನು ಹಿಡಿದು, ಊರಿಂದ ಊರಿಗೆ ಹಾಡುತ್ತಾ, ಬದುಕಿನ ಭಾರವನು ಮರೆತು ಬಾಳನ್ನು ನಡೆಸುವುದು ಎಂದೋ?" ಎಂದು ಕೇಳಿಕೊಳ್ಳುತ್ತಾ, ಅಂತಹ ಮುಕ್ತ ಭಾವದ ಬದುಕನ್ನು ನಡೆಸಿದರೆ ಚೆನ್ನ ಎನ್ನುವಂತಹ ಸಂದೇಶವನ್ನು ನಮಗೂ ನೀಡಿದ್ದಾರೆ.
When will start living like a mendicant - having just a carry bag as a possession, going from town to town, singing songs, forgetting about burdens, letting the joys and griefs not affect your mind? That day, you will be truly happy. - Mankutimma
Video Coming Soon
Detailed video explanations by scholars and experts will be available soon.