Back to List

Kagga 924 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮನೆಯ ಮಾಳಿಗೆಗಲ್ಲ, ಮುಡಿಯ ಕೊಪ್ಪಿಗೆಗಲ್ಲ । ಇನಿವಣ್ಣು ತನಿಯ ಕಾಳೆಂಬುದೇನಿಲ್ಲ ॥ ಬಣಗು ಕುರಿಚಲು ಗಿಡದ ಬಾಳೇನು? ನೀನಂತು । ಒಣಗಿದೊಡೆ ಸವುದೆ ಸರಿ - ಮಂಕುತಿಮ್ಮ ॥ ೯೨೪ ॥

maneya mALigege alla, muDiya koppigege alla । inivaNNu taniya kALembudEnu illa ॥ baNagu kurichalu giDada bALEnu? nInantu । oNagidoDe savude sari - Mankutimma ॥ 924 ॥

Meaning in Kannada

ನೀನು ಒಂದು ಕುರಿಚಲು ಗಿಡವಿದ್ದಂತೆ. ಹೇಗೆ ಕುರಿಚಲು ಗಿಡ, ಯಾವ ಮನೆಯ ಮಾಳಿಗೆಗೆ ತೊಲೆಯೋ, ಧೂಲವೋ ಆಗುವುದಿಲ್ಲವೋ ಅಥವಾ ಯಾರ ಮುಡಿಗೂ ಅಂದ ಮತ್ತು ಸುಗಂಧವನ್ನೀಯುವ ಹೂಗಳನ್ನು ಅರಳಿಸುವುದಿಲ್ಲವೋ ಅಥವಾ ರುಚಿಯಾದ ಹಣ್ಣೋ ಅಥವಾ ಅಹಾರವಾಗಬಹುದಾದ ಧಾನ್ಯವನ್ನೋ ಕೊಡುವುದಿಲ್ಲವೋ ಹಾಗೆಯೇ ನಿನ್ನ ಜೀವನವೂ ಸಹ, ನಿಷ್ಪ್ರಯೋಜಕ. ಹೇಗೆ ಕುರಿಚಲು ಗಿಡ ಒಣಗಿದರೆ ಕೇವಲ ಒಲೆಗೆ ಒಡ್ಡಲು ಸೌದೆಯಾಗಬಹುದೋ ಅದೇ ರೀತಿ ನೀನು ಎಂದು, ನಮ್ಮೆಲ್ಲರ ಬದುಕಿನ ಪರಿಯನ್ನು ವಿಶ್ಲೇಷಿಸಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

It is not used for making roof for the house. It has no flowers that a lady can wear on her head. It does not have sweet fruits, neither juicy nuts. The garden weed is thus utterly useless. You are just like that. Once dried (dead), just equivalent to firewood. - Mankutimma

Themes

Nature

Video Section

Video Coming Soon

Detailed video explanations by scholars and experts will be available soon.