Mankutimmana Kagga by D.V. Gundappa
ಎಲ್ಲರಿಗಮೀಗ ನಮೊ - ಬಂಧುಗಳೆ, ಭಾಗಿಗಳೆ । ಉಲ್ಲಾಸವಿತ್ತವರೆ, ಮನವ ತೊಳೆದವರೆ ॥ ಟೊಳ್ಳು ಜಗ, ಸಾಕು ಬಾಳ್ - ಎನಿಸಿ ಗುರುವಾದವರೆ । ಕೊಳ್ಳಿರೀ ನಮವನೆನು- ಮಂಕುತಿಮ್ಮ ॥ ೯೨೨ ॥
ellarigam iiga namo - bandhugaLe, bhAgigaLe । ullAsavittavare, manava toLedavare ॥ ToLLu jaga, sAku bAL - enisi guruvAdavare । koLLirI namavanu enu - Mankutimma ॥ 922 ॥
ನನ್ನ ಬಂಧುಗಳೇ, ನನ್ನ ಬದುಕನ್ನು ಹಂಚಿಕೊಂಡವರೇ, ಎನಗೆ ಸಂತೋಷವನ್ನು ಕೊಟ್ಟವರೇ, ಎನ್ನ ಮನವನ್ನು ತೊಳೆದವರೇ, ಈ ಜಗತ್ತು ಟೊಳ್ಳು, ಈ ಬಾಳು ಸಾಕು ಎನ್ನುವಂತಹ ಭಾವವನ್ನು ಎನಗೆ ಬರುವಂತೆ ಮಾಡಿ, ನನ್ನ ಗುರುಸ್ಥಾನದಲ್ಲಿರುವವರೇ, ನಿಮಗೆಲ್ಲರಿಗೂ ನನ್ನ ನಮಸ್ಕಾರ, ಎಂದು ಹೇಳುತ್ತಾ, ನೀವೂ ಸಹ ಅಂತಹ ಭಾವ ಮನಸ್ಸಿನಲ್ಲಿ ತುಂಬಿಕೊಂಡು ನೀವು ನಮನವನ್ನು ಹೇಳಿ ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Now is the time to bow to everybody - to the relatives, to the partners, to the people who gave you joy, to those who cleansed the mind, to those who became your teacher by making you realize that the world is just an illusion; enough with it. Pray to all of them to accept your bow. - Mankutimma
Video Coming Soon
Detailed video explanations by scholars and experts will be available soon.