Mankutimmana Kagga by D.V. Gundappa
ಇಳಿಯುವೆನು ಮುಳುಗುವೆನು ವಿಶ್ವಾತ್ಮಸಾಗರದಿ । ಮುಳುಮುಳುಗಿ ಕಳೆಯುವನು ಬೇರೆತನದರಿವ ॥ ಇಳೆಬಾನ್ಗಳಾಟದಲಿ ಕುಣಿಯುವೆನು ಮೈಮರೆತು । ಗಳಿಸೀ ಮನಃಸ್ಥಿತಿಯ - ಮಂಕುತಿಮ್ಮ ॥ ೯೨೧ ॥
iLiyuvenu muLuguvenu vishvAtmasAgaradi । muLumuLugi kaLeyuvenu bEretanada ariva ॥ iLe bAngaLa aaTadali kuNiyuvenu maimaretu । gaLisu ii manaH sthitiya - Mankutimma ॥ 921 ॥
ನಾನು ಬೇರೆ, ನಾನು ಎಲ್ಲರಿಗಿಂತ ಭಿನ್ನ ಎನ್ನುವ ಭಾವವನ್ನು ಕಳೆದುಕೊಂಡು, ವಿಶ್ವಾತ್ಮಭಾವದ ಸಾಗರಲ್ಲಿ ನಾನು ಇಳಿಯುತ್ತೇನೆ, ಮುಳುಗುತ್ತೇನೆ, ಈ ಆಕಾಶ ಮತ್ತು ಧಾರೆಗಳ ನಡುವಿನ ಬಾಳಿನಲ್ಲಿ ಮೈ ಮರೆತು ಕುಣಿಯುತ್ತೇನೆ, ಎನ್ನುವಂತಹ ಆಶಯಗಳನ್ನು ತುಂಬಿಕೊಂಡ ಮನಸ್ಸಿನ ಸ್ಥಿತಿಯನ್ನು ಬೆಳೆಸಿಕೊಳ್ಳುತ್ತೇನೆ ಎಂದು ಹೇಳುತ್ತಾ, ನಮಗೂ ಅಂತಹ ಸ್ಥಿತಿಗೆ ಹೋಗಲು ಮಾರ್ಗವನ್ನು ಸೂಚಿಸಿದ್ದಾರೆ ನಮ್ಮ ಗುಂಡಪ್ಪನವರು.
One must try to get into this state of mind: I will enter the ocean of lives (this world), will drown, will drown again and again till I lose all feelings of being different from the world. I will watch the play between the earth and the sky and dance with joy and forget myself. What a beautiful relaxed state of mind it is indeed? - Mankutimma
Video Coming Soon
Detailed video explanations by scholars and experts will be available soon.