Back to List

Kagga 919 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಜೀವದುದಯ ರಹಸ್ಯ, ಜೀವವಿಲಯ ರಹಸ್ಯ । ಜೀವನದ ದೃಶ್ಯ ಮರುವಿನ ಬಿಸಿಲ್ಗುದುರೆ ॥ ಭಾವಿಸಲಿದೇ ತತ್ತ್ವ; ಬ್ರಹ್ಮಮಾಯೆಯೆ ವಿಶ್ವ । ಕೇವಲಾತ್ಮ ಬ್ರಹ್ಮ - ಮಂಕುತಿಮ್ಮ ॥ ೯೧೯ ॥

jIvada udaya rahasya, jIva vilaya rahasya । jIvanada dRushya maruvina bisil kudure ॥ bhAvisalu idE tattva; brahma mAyeye vishva । kEvalAtma brahma - Mankutimma ॥ 919 ॥

Meaning in Kannada

ಒಂದು ಜೀವಿಯ ಹುಟ್ಟು ಮತ್ತು ಸಾವು ಎರಡೂ ನಮಗೆ ರಹಸ್ಯವಾಗಿಯೇ ಇದೆ. ಇನ್ನು ಜೀವನದ ದೃಶ್ಯವೋ, ಮರಳುಗಾಡಿನ ಮರೀಚಿಕೆಯಂತೆ ಇದೆ. ನಾವು ಇಷ್ಟನ್ನು ಮಾತ್ರ ಭಾವಿಸಿಕೊಳ್ಳಬಹುದು ಮತ್ತು ನಮಗೆ ಆರ್ಥವಾಗುವುದು ಇಷ್ಟೇ ತತ್ವ. ಪರಮಾತ್ಮನು ಸೃಷ್ಟಿಸಿರುವ ಮಾಯೆಯೇ ‘ವಿಶ್ವ’. ಮಾಯೆಯಿಂದ ಹೊರಬಂದರೆ ನಮಗೆ ಕೇವಲ ಬ್ರಹ್ಮದ ಅನುಭವವಾಗುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Birth of life is a mystery. End of life is also a mystery. The lief in between is nothing but a mirage. If you think deeply, this is the ultimate truth. The whole world is an illusion created by Brahma. The only thing that stands on its own truth is the supreme soul itself (Brahma himself). - Mankutimma

Themes

WisdomLifeDeathSelf

Video Section

Video Coming Soon

Detailed video explanations by scholars and experts will be available soon.