Mankutimmana Kagga by D.V. Gundappa
ಮುದಿಕುರುಡಿ ಹೊಂಗೆಯನು "ಬಾದಾಮಿ, ಕೋ" ಯೆನುತ । ಪದುಳದಿಂ ಮೊಮ್ಮಂಗೆ ಕೊಡಲು ಸಿಹಿಯಹುದೆ? ॥ ಹೃದಯವೊಳಿತಾದೊಡೇಂ? ತಿಳಿವಿಹುದೆ? ಜಾಣಿಹುದೆ? । ಸುಧೆ ಬಂತೆ ಸುಲಭದಲಿ? - ಮಂಕುತಿಮ್ಮ ॥ ೮೬೩ ॥
mudi kuruDi hongeyanu "bAdAmi, kO" yenuta । paduLadim mommange koDalu sihiyahude? ॥ hRudayavu oLitAdoDEm? tiLivihude? jANihude? । sudhe bante sulabhadali? - Mankutimma ॥ 863 ॥
ಮುದುಕಿಯಾದ ಕುರುಡಿ ಮೊಮ್ಮಗನಮೇಲೆ ಪ್ರೀತಿ ಮತ್ತು ಅಕ್ಕರೆಯಿಂದ "ಬಾದಾಮಿಯನ್ನು ತೆಗೆದುಕೋ" ಎಂದು ಹೊಂಗೆಯ ಬೀಜವನ್ನು ಕೊಟ್ಟರೆ ಆ ಹೊಂಗೆಯ ಬೀಜ ಬಾದಾಮಿಯಂತೆ ಸಿಹಿಯಾಗಿರಲು ಸಾಧ್ಯವೇ? ಮನಸ್ಸು ಒಳ್ಳೆಯದಾದರೇನು,ಅಂತಹ ಮನಸ್ಸಿನಿಂದ ಕಾರ್ಯಮಾಡುವಾಗ ಅರಿವು ಮತ್ತು ಜಾಣತನವಿಲ್ಲದಿದ್ದರೆ, ಪ್ರಯೋಜನವಿಲ್ಲ. ಸಮುದ್ರ ಮಂಥನದಲ್ಲಿ ಕಡೆಗೆ ಬಂದದ್ದು ಅಮೃತವೇ ಆದರೂ ಅದು ಸುಲಭಕ್ಕೆ ಬಂತೇ? ಎಂದು, ಸರ್ವಕಾಲಕ್ಕೂ ಸೂಕ್ತವಾದ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಮುಕ್ತಕದಲ್ಲಿ.
"A blind old lady may give a beech nut to her grandson thinking (and telling) that it is an almond. That does not make it sweet. Does it? Is it just enough to have all the good intentions at heart? Is it wise? Is it the right thing? Can great things (like getting elixir which required the churning of the ocean) get done just like that (by god intentions alone)?" - Mankutimma
Video Coming Soon
Detailed video explanations by scholars and experts will be available soon.