Mankutimmana Kagga by D.V. Gundappa
ನಭದ ಬಯಲೊಳನಂತ, ಮನದ ಗುಹೆಯೊಳನಂತ । ವುಭಯದಾ ನಡುವೆ ಸಾದ್ಯಂತ ಜೀವಕಥೆ ॥ ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು । ಹಬೆಗುಳ್ಳೆಯೋ ಸೃಷ್ಟಿ - ಮಂಕುತಿಮ್ಮ ॥ ೮೫ ॥
nabhada bayaloL ananta, manada guheyoL anantavu । ubhayadA naDuve sAdyanta jIvakathe ॥ vibhuvu obbanI gALibuDDegaLanu Uduvanu । habeguLLeyO sRuShTi - Mankutimma ॥ 85 ॥
ಆಕಾಶದ ವಿಸ್ತಾರ ಅನೂಹ್ಯ ಮತ್ತು ಅನಂತ. ಹಾಗೆಯೇ ಜೀವಿಗಳ ಮನಸ್ಸಿನ ಆಳ ಮತ್ತು ವಿಸ್ತಾರಗಳೂ ಸಹ. ಈ ಸೃಷ್ಟಿಯಲ್ಲಿ ಆ ಪರಮಾತ್ಮನಿಂದ ಸೃಷ್ಟಿಸಲ್ಪಟ್ಟ ನಾವುಗಳು ಕೇವಲ ಗಾಳಿಯ ಗುಳ್ಳೆಗಳಂತೆ. ಒಂದು ಆದಿ ಮತ್ತು ಒಂದು ಅಂತ್ಯ ಇವುಗಳ ನಡುವೆ ನಮ್ಮ ಜೀವನದ ಕಥೆ. ಇಡೀ ಸೃಷ್ಟಿಯೇ ಒಂದು ದೊಡ್ಡ ಗಾಳಿಯ ಗುಳ್ಳೆಯಂತೆ ಎಂದು ಒಂದು ಗಹನವಾದ ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು.
There is infinity in the sky, there is infinity in the depths of our conscience. In between these outer and inner worlds, the story of our lives are finite - with definite start and end. God is the one who creates these air bubbles in which we lead our lives assuming that is all there is in this creation. - Mankutimma
Video Coming Soon
Detailed video explanations by scholars and experts will be available soon.