Back to List

Kagga 628 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಋಣವ ತೀರಿಸಬೇಕು, ಋಣವ ತೀರಿಸಬೇಕು । ಋಣವ ತೀರಿಸುತ ಜಗದಾದಿಸತ್ತ್ವವನು ॥ ಜನದಿ ಕಾಣುತ್ತದರೊಳ್ ಒಂದುಗೂಡಲುಬೇಕು । ಮನೆಯೊಳಗೆ ಮಠ ನಿನಗೆ - ಮಂಕುತಿಮ್ಮ ॥ ೬೨೮ ॥

RuNava tIrisabEku, RuNava tIrisabEku । RuNava tIrisuta jagada Adi sattvavanu ॥ janadi kANutta adaroL ondugUDalu bEku । maneyoLage maTha ninage - Mankutimma ॥ 628 ॥

Meaning in Kannada

ನಾವು ಋಣವನ್ನು ತೀರಿಸಬೇಕು. ಆ ಪರಮಾತ್ಮ ಸತ್ವವನ್ನು ಎಲ್ಲರಲ್ಲೂ ಕಾಣುತ್ತ ಎಲ್ಲರೊಳಗೆ ಒಂದಾಗಿ ಬದುಕಬೇಕು. ಪಡೆದದ್ದನ್ನೆಲ್ಲ ಹಿಂತಿರುಗಿಸಿ ಸಾಲ ತೀರಿಸಬೇಕು. ಸಂಸಾರದಲ್ಲಿ ಇದ್ದೇ ಎಲ್ಲವನ್ನೂ ತೊರೆದು ಸನ್ಯಾಸಿಯಾಗಬೇಕು. ಮನೆಯನ್ನೇ ಮಠವಾಗಿಸಿಕೊಳ್ಳಬೇಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

One has to repay the debt to this world. There is no getting away. We have to repay debt by seeing the traces of universal cosmic spirit in every being of the world. We have to try to assimilate into the spirit (world). This is the religious goal that can achieved while we go about doing the everyday work of this world. Your own home is your temple." - Mankutimma

Themes

LifeDuty

Video Section

Video Coming Soon

Detailed video explanations by scholars and experts will be available soon.