Back to List

Kagga 617 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಧ್ವನಿತ ಪ್ರತಿಧ್ವನಿತ ಮನುಜಜೀವಿತವೆಲ್ಲ । ಕುಣಿವುದವನೆದೆ ಜಗತ್ಪ್ರಕೃತಿ ಪಾಡುವವೊಲ್ ॥ ಇನಿದಕೊಲವಳಲಿಗನುತಾಪ; ಸೆಣಸಿಗೆ ಬೀರ । ಘನಗರ್ಜಿತಕೆ ದೈನ್ಯ - ಮಂಕುತಿಮ್ಮ ॥ ೬೧೭ ॥

dhvanita pratidhvanita manuja jIvitavella । kuNivudu avana ede jagat prakRuti pADuvavol ॥ inidake olava aLalige anutApa; seNasige bIra । ghanagarjitake dainya - Mankutimma ॥ 617 ॥

Meaning in Kannada

ಜಗತ್ತಿನ ಪ್ರಕೃತಿ ಜನ್ಯವಾದ ತ್ರಿಗುಣಗಳಿಗನುಸಾರವಾಗಿ ಮನುಷ್ಯನ ಎದೆಯಲ್ಲಿ ಉಂಟಾಗುವ ಭಾವನೆಗಳಿಂದ ಇವನು ಧ್ವನಿಗೆ ಪ್ರತಿಧ್ವನಿ ಎಂದರೆ ಕ್ರಿಯೆಗೆ ಒಂದು ಪ್ರತಿಕ್ರಿಯೆ ತೋರುತ್ತಾನೆ. ಪ್ರೀತಿ ತೋರಿದರೆ ಪ್ರೀತಿ, ದುಃಖದಲ್ಲಿ ಮರುಕ ಅಥವಾ ಅನುಕಂಪ, ಹೋರಾಟದಲ್ಲಿ ಧೈರ್ಯ, ಘೋರ ಘರ್ಜನೆಗೆ ದೈನ್ಯತೆಯನ್ನು ತೋರುತ್ತಾನೆ ಎಂದು ವಸ್ತು ವಿಷಯ ಮತ್ತು ವ್ಯಕ್ತಿಗಳ ಕುರಿತು ಮನುಷ್ಯನ ಪ್ರತಿಕ್ರಿಯೆಯ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

Meaning & Interpretation

The story of the human life is just about echoing the voices of the world around him. His heart dances to the tunes of the nature surrounding him. Love for love, compassion for misery (sadness), bravery for provocation and submission for mighty roaring." - Mankutimma

Themes

LifeNatureLove

Video Section

Video Coming Soon

Detailed video explanations by scholars and experts will be available soon.