Back to List

Kagga 544 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅನುಭವದ ಪಾಲೊಳು ವಿಚಾರ ಮಂಥನವಾಗೆ । ಜನಿಯಿಕುಂ ಜ್ಞಾನನವನೀತವದೆ ಸುಖದಂ ॥ ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ । ನಿನಗೆ ಧರುಮದ ದೀಪ - ಮಂಕುತಿಮ್ಮ ॥ ೫೪೪ ॥

anubhavada pAloLu vichAra manthanavAge । janiyikum jnAna navanItavade sukhadam ॥ giNiyOdu pustaka jnAna; ninna anubhavave । ninage dharumada dIpa - Mankutimma ॥ 544 ॥

Meaning in Kannada

ಅನುಭವವೆಂಬ ಹಾಲನ್ನು ವಿಚಾರವೆಂಬ ಕಡಗೋಲಿನಿಂದ ಮಥಿನಗೊಂಡು ಜ್ಞಾನವೆಂಬ ಬೆಣ್ಣೆ ಹೊರಬಂದಾಗ ಅದು ಸುಖವನ್ನು ನೀಡುತ್ತದೆ. ಪುಸ್ತಕದ ಜ್ಞಾನ ಗಿಳಿ ಪಾಠವಿದ್ದಂತೆ. ಹಾಗಾಗಿ ನಿನಗೆ ನಿನ್ನ ಜೀವನಾನುಭವವೇ ಧರ್ಮದ ದರ್ಶನ ಮಾಡಿಸುವಂತಹ ದೀಪ ಎಂದು ಬಾಳಿನ ಪರಮ ಸತ್ಯವನ್ನು ಅರುಹಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Only when the milk of experience is churned with deep contemplation, that the butter of knowledge gets realized. One feels very happy when it happens. Knowledge from books is like the wisdom of a parrot. It is the knowledge based on experience that will be guiding lights for leading a life according to dharma. - Mankutimma

Themes

WisdomLifeMorality

Video Section

Video Coming Soon

Detailed video explanations by scholars and experts will be available soon.