Mankutimmana Kagga by D.V. Gundappa
ಆಶೆ ಮಂಥರೆ, ನರವಿವೇಚನೆಯೆ ಕೈಕೇಯಿ । ಬೀಸೆ ಮನದುಸಿರು ಮತಿದೀಪವಲೆಯುವುದು ॥ ವಾಸನೆಗಳನುಕೂಲ ಸತ್ಯತರ್ಕಕೆ ಶೂಲ । ಶೋಷಿಸಾ ವಾಸನೆಯ - ಮಂಕುತಿಮ್ಮ ॥ ೫೪೨ ॥
Ashe manthare, nara vivechaneye kaikEyi । bIse manadusiru mati dIpavu aleyuvudu ॥ vAsanegaLa anukUla satya tarkake shUla । shOShisA vAsaneya - Mankutimma ॥ 542 ॥
ನಮ್ಮ ಮನದಲ್ಲಿ ಉದ್ಭವವಾಗುವ ಆಸೆಗಳನ್ನು ಮಂಥರೆಗೆ ಮತ್ತು ಮನುಷ್ಯರ ವಿವೇಚನೆಯನ್ನು ಕೈಕೇಯಿಗೆ ಹೋಲಿಸಿದ್ದಾರೆ ಮಾನ್ಯಗುಂಡಪ್ಪನವರು. ಮನಸ್ಸಿನಲ್ಲಿ ಉದ್ಭವವಾಗುವ ಆಸೆಗಳು ತನ್ನ ಹೂಂಕಾರದ ರಭಸದಿಂದ ಮತಿ ಎಂದರೆ ವಿವೇಕವನ್ನು ತಲ್ಲಣಗೊಳಿಸುತ್ತದೆ. ನಮ್ಮ ಪೂರ್ವ ವಾಸನೆಗಳಿಗನುಕೂಲವಾಗುವಂತೆ ಓಲಾಡುವ ನಮ್ಮ ಆಸೆಗಳ ವಿಶ್ಲೇಷಣೆ ಮಾಡಿದರೆ, ಸತ್ಯಕ್ಕೆ ಇರಿತವಾಗುತ್ತದೆ. ಹಾಗಾಗಿ ಸತ್ಯದ ಪಥದಿಂದ ದೂರಾಗಿಸುವಂತಹ ಈ ವಾಸನೆಗಳನ್ನು ನಿನ್ನ ಸ್ವಭಾವ ಮತ್ತು ಗುಣದಿಂದ ದೂರಾಗಿಸು ಅಥವಾ ಇಲ್ಲವಾಗಿಸು ಎಂದು ಒಂದು ಸೂಕ್ತ ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
Desire is Manthara. Man's rational mind is Kaikeyi. As long as desire did not could one's thoughts, a man follows dharma and lives life honestly. As soon as desire breathes into his mind, the light of wisdom strays and bends the truth and logic to satisfy the desires. Resist and kill such tremptations. - Mankutimma
Video Coming Soon
Detailed video explanations by scholars and experts will be available soon.