Back to List

Kagga 54 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಫಲವಿಲ್ಲ ಕಾರ್ಯಕಾರಣವಾದದಿಂ ತತ್ತ್ವ । ಸಿಲುಕದೆಮ್ಮಯ ತರ್ಕಕರ್ಕಶಾಂಕುಶಕೆ ॥ ಸುಳಿವುದಾಗೀಗಳದು ಸೂಕ್ಷ್ಮಾನುಭವಗಳಲಿ । ತಿಳಿಮನದೆ ನೋಳ್ಪರ್ಗೆ - ಮಂಕುತಿಮ್ಮ ॥ ೫೪ ॥

phalavilla kAryakAraNa vAdadim tattva । silukadu emmaya tarka karkashAnkushake ॥ suLivudu AgIgaLadu sUkShmAnubhavagaLali । tiLimanade nOLparge - Mankutimma ॥ 54 ॥

Meaning in Kannada

ಈ ಜಗತ್ತಿನ ಸೃಷ್ಟಿಯ ಕರ್ತೃ,ಕರಣ, ಕಾರ್ಯ, ಕಾರಣ ಇವುಗಳ ಬಗ್ಗೆ ಅತಿಯಾದ ವಾದ ವಿವಾದದಿಂದ ನಮಗೆ ತತ್ವವು ಸಿಗುವುದೇ ಇಲ್ಲ. ಆದರೆ ನಿರ್ಮಲವಾದ ಮತ್ತು ತಿಳಿಯಾದ ಮನದಲ್ಲಿ ಆಗಾಗ ಸೂಕ್ಷ್ಮಾನುಭವಕ್ಕೆ ಅದು ಗೋಚರವಾಗಬಹುದು. ಯಾರಿಗೆ? ನೋಡಲು ಇಚ್ಚಿಸುವವರಿಗೆ ಮತ್ತು ನೋಡುವವರಿಗೆ ಅದು ಆಗಾಗ ಗೋಚರಿಸುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

Doing a careful cause-effect analysis for all that we see will not lead us to the knowledge of the truth. Our logic and methods of deduction are mere jabbing forks at the truth - some times it sticks. Some time not. But never the complete truth. But for people who can think with a clear open mind - the complete truth surfaces at times in form of subtle experiences. - Mankutimma

Themes

WisdomLifeSocietyLove

Video Section

Video Coming Soon

Detailed video explanations by scholars and experts will be available soon.