Back to List

Kagga 488 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಜೀವಿ ಬೇಡಿದಿರೆ ದೈವವನು ಕೇಳುವರಾರು? । ದೈವ ಗುಟ್ಟಿರಿಸದಿರೆ ಜೀವಿಯರಸುವುದೇಂ? ॥ ಜೀವ ದೈವಂಗಳ ಪರಸ್ಪರಾನ್ವೇಷಣೆಯೆ । ಲಾವಣ್ಯ ಸೃಷ್ಟಿಯಲಿ - ಮಂಕುತಿಮ್ಮ ॥ ೪೮೮ ॥

jIvi bEDadire daivavanu kELuvarAru? । daiva guTTirisadire jIviyu arasuvudu Eo? ॥ jIva daivangaLa paraspara anvEShaNeye । lAvaNya sRuShTiyali - Mankutimma ॥ 488 ॥

Meaning in Kannada

ಜೀವಿ ‘ಕಾಪಾಡು’ಎಂದು ಬೇಡದ್ದಿದರೆ ಆ ದೇವರನ್ನು ಕೇಳುವವರಾರು ಅಥವಾ ಅ ದೈವವೆಂಬ ವಸ್ತು ನಿಗೂಢವಾಗಿಲ್ಲದಿದ್ದರೆ, ಜೀವಿ ಹುಡುಕುವುದೇನನ್ನು? ಹಾಗಾಗಿ ಜೀವನದಲ್ಲಿ ಈ ದೈವ ಮತ್ತು ಜೀವಯ ಪರಸ್ಪರ ನಿರ್ಭರತೆಯೇ ಈ ಸೃಷ್ಟಿಗೆ ಒಂದು ಮೆರಗನ್ನು ಕೊಟ್ಟಿದೆ ಎಂದು ಒಂದು ಕಡು ಸತ್ಯವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

If no being ever prayed, then who cares for a God? If God did not hide (the secret), then what would the being search for? (What would then be the purpose of existence?) Both God and the being are in search of each other. This is the beauty of this creation. - Mankutimma

Themes

DevotionLifeNatureLove

Video Section

Video Coming Soon

Detailed video explanations by scholars and experts will be available soon.