Back to List

Kagga 46 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಇರಲಿ ಜೀವರಹಸ್ಯವರೆಪರದೆಯೊಳಗಡಗಿ । ಅರಸಿ ವರಿಸುವರಾರು ಬೀದಿಬತ್ತಲಿಯ? ॥ ಅರಳಿಪುದದಡಗಿರ್ದೊಡಾಗ ನಮ್ಮದೆಗಣ್ಣ । ಸುರಸತೆಯ ಕುತುಕದಿಂ - ಮಂಕುತಿಮ್ಮ ॥ ೪೬ ॥

irali jIvarahasyavu areparadeyoLage aDagi । arasi varisuvarAru bIdibattaliya? ॥ araLipudadu aDagirdoDe Aga nammadegaNNa । surasateya kutukadim - Mankutimma ॥ 46 ॥

Meaning in Kannada

ಈ ಸೃಷ್ಟಿಯ ರಹಸ್ಯವು ತನ್ನ ನಿಜರೂಪವ ತೋರದೆ, ಒಂದು ಮಸುಕಾದ ಪರದೆಯೊಳಗೆ ಅಡಗಿದ್ದರೆ ಇರಲಿ. ನಮಗೆ ನಿಜವಾದ ಜ್ಞಾನವನ್ನು ಕೊಡಬೇಕಾದ ವಸ್ತು ಹೀಗೆ ಅಡಗಿ ಕುಳಿತ್ತಿದ್ದರೆ, ಹಾದಿಯಲ್ಲಿ ಹೋಗುವ ಓರ್ವ ಹುಚ್ಚಿಯನ್ನು ಯಾರಾದರೂ ಹುಡುಕಿಕೊಂಡು ಹೋಗಿ ಹೇಗೆ ವರಿಸುವುದಿಲ್ಲವೋ ಹಾಗೆ, ನಮ್ಮ ಅಂತಃಚಕ್ಷು ಕಾತರದಿಂದ ಅದನ್ನು ಅರಿಯಲು ಕಾಯುತ್ತಿರುತ್ತದೆ ಎಂದು ಪರಮಾತ್ಮನನ್ನು ಅರಿತುಕೊಳ್ಳುವ ವಿಚಾರವನ್ನು ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.

Meaning & Interpretation

Let the mystery of life be concealed behind a translucent veil - only barely visible. Will any one willingly marry a brinde who walks around naked on streets. People will not respect something that is easily accessible. Only when the mystery blooms in hiding does it tantalize our hearts with curiosity. - Mankutimma

Themes

LifeNatureSocietyLove

Video Section

Video Coming Soon

Detailed video explanations by scholars and experts will be available soon.