Mankutimmana Kagga by D.V. Gundappa
ಬೆಂಕಿಯುಂಡೆಯ ಬೆಳಕು ಬೆಣ್ಣೆಯುಂಡೆಯ ಬೆಳಕು । ಮಂಕುವಿಡಿಸಲು ಸಾಕು ಮಣ್ಣುಂಡೆ ಕಣ್ಗೆ ॥ ಶಂಕೆಗೆಡೆಯಿರದು ಕತ್ತಲೆಯೆ ಜಗವನು ಕವಿಯೆ । ಬೊಂಕುದೀವಿಗೆ ತಂಟೆ - ಮಂಕುತಿಮ್ಮ ॥ ೪೫ ॥
benkiyunDeya beLaku beNNeyunDeya beLaku । mankuviDisalu sAku maNNuNde kaNge ॥ shankege eDeyiradu kattaleye jagavanu kaviye । bonkudIvige tanTe - Mankutimma ॥ 45 ॥
ಸೂರ್ಯನ ಬೆಳಕಗಾಲೀ ಅಥವಾ ಚಂದ್ರನ ಬೆಳಕಗಾಲೀ ಅಥವಾ ಒಂದು ಪುಟ್ಟ ಹಣತೆಯಾದರೂ ಸಹ ನಮಗೆ ನೋಡಲು ಅನುವು ಮಾಡಿಕೊಡುತ್ತದೆ. ಆದರೆ ಜಗತ್ತನ್ನು ಸಂಪೂರ್ಣ ಕತ್ತಲೆ ಆವರಿಸಿದರೆ, ನೋಡುವ ಪ್ರಶ್ನೆಯೇ ಬರುವುದಿಲ್ಲ. ಆದರೆ ಒಂದು ಅರ್ದಂಬರ್ದವಾಗಿ ಕತ್ತಲೆ ಬೆಳಕಿನಾಟ ಕೇವಲ ತೊಂದರೆಯನ್ನು ಕೊಡುತ್ತದೆ ಎಂದು ಸೂಚ್ಯವಾಗಿ ಒಂದು ಗಹನವಾದ ವಿಷಯವನ್ನು ಪ್ರಸ್ತಾಪ ಮಾಡುತ್ತಾರೆ, ಮಾನ್ಯ ಗುಂಡಪ್ಪನವರು.
A ball of fire has light. So does a ball of butter. One is hot, one is cold. Eyes can not differentiate between the two. A simple ball of clay moulded into any shape is enough to decieve the eyes. The whole world is in darkness people will run to even a small lamp for light however inadequate it may be. After that, they will have no doubt that what ever they see in that low light is real. [Translator's note: More stress is laid on how limitted our senses are. Also it shows how we get comfortable with what we understand and believe it to be true.] - Mankutimma
Video Coming Soon
Detailed video explanations by scholars and experts will be available soon.