Back to List

Kagga 434 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನಗುವೊಂದು ರಸಪಾಕವಳುವೊಂದು ರಸಪಾಕ । ನಗುವಾತ್ಮ ಪರಿಮಳವ ಪಸರಿಸುವ ಕುಸುಮ ॥ ದುಗುಡವಾತ್ಮವ ಕಡೆದು ಸತ್ತ್ವವೆತ್ತುವಮಂತು । ಬಗೆದೆರಡನುಂ ಭುಜಿಸು - ಮಂಕುತಿಮ್ಮ ॥ ೪೩೪ ॥

naguvondu rasapAkavaLuvondu rasapAka । naguvAtma parimaLava pasarisuva kusuma ॥ duguDavAtmava kaDedu sattvavettuvamantu । bagederaDanum bhujisu - Mankutimma ॥ 434 ॥

Meaning in Kannada

ಮನಸ್ಸಿನ ಭಾವರಸದಲ್ಲಿ ಉಕ್ಕಿಹರಿಯುವುದೇ ನಗು ಮತ್ತು ಅಳು. ಆತ್ಮದ ಸಂತೋಷದ ಭಾವ ಪರಿಮಳವನ್ನು ಹರಡುವ ಹೂವೇ ‘ನಗು’. ಕಷ್ಟಗಳನ್ನು ಅನುಭವಿಸಿದ ಆತ್ಮವನ್ನು ಕಡೆದು ಸತ್ವವೆನ್ನುವ ಬೆಣ್ಣೆಯನ್ನು ತೆಗೆಯುವ ಕಡಗೋಲಂತೆ ‘ಅಳು’. ಇವೆರಡರ ಅನುಭವವನ್ನೂ ಪಡೆದು ನೀ ಜೀವಿಸಬೇಕೆಂದು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Happiness and grief are both emotions. While happiness is like fragrance of the flower of the soul. Grief helps you centrifuge your thoughts and gets the truth out. Identify them both and experience them. - Mankutimma

Themes

WisdomLifeNatureSocietyLove

Video Section

Video Coming Soon

Detailed video explanations by scholars and experts will be available soon.