Back to List

Kagga 433 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅಳುವೇನು? ನಗುವೇನು? ಹೃತ್ಕಪಾಟೋದ್ಘಾಟ । ಶಿಲೆಯೆ ನೀಂ ಕರಗದಿರಲ್? ಅರಳದಿರೆ ಮರಳೇಂ? ॥ ಒಳಜಗವ ಹೊರವಡಿಪ, ಹೊರಜಗವನೊಳಕೊಳುವ । ಸುಳುದಾರಿಯಳುನಗುವು - ಮಂಕುತಿಮ್ಮ ॥ ೪೩೩ ॥

aLuvEnu? naguvEnu? hRutkapATa udghATa । shileya nIm karagadiral? araLadire maraLEm? ॥ oLajagava horavaDipa, horajagavanu oLakoLuva । suLudAriyaLu naguvu - Mankutimma ॥ 433 ॥

Meaning in Kannada

ಅಳುವೇನು,ನಗುವೇನು? ಅವು ಹೃದಯದ ಬಾಗಿಲನ್ನು ತೆಗೆದು ಮುಚ್ಚುವ ಸಾಧನಗಳು. ಕರಗದೆ ಇರಲು ನೀನು ಕಲ್ಲೇನು?ಅಥವಾ ಅರಳದೆ ಇರಲು ನೀನು ಮರಳೇನು? ನಿನ್ನ ಒಳಗಿರುವ ಭಾವ ಜಗತ್ತನ್ನು ಹೊರಜಗತ್ತಿನೊಂದಿಗೆ ಬೆರೆಸಿ ಹೊರಜಗತ್ತಿನ ಭಾವ ಸಂಪತ್ತನ್ನು ನಿನ್ನ ಒಳಕ್ಕೆ ಸೆಳೆದುಕೊಳ್ಳಲು ಈ ‘ನಗು ಮತ್ತು ಅಳು’ ಗಳೇ ಸುಲಭದ ದಾರಿಗಳು ಎಂದು ಒಂದು ಅದ್ಭುತ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

What is the meaning of crying? What does laughing mean? These are ways to open the doors to your heart. Are you a stone that does not melt (in grief)? Are you sand that does not bloom (in happiness)? Weeping and laughing are shortcuts to make inner emotions come out and take in the senses of world. - Mankutimma

Themes

LifeLove

Video Section

Video Coming Soon

Detailed video explanations by scholars and experts will be available soon.