Mankutimmana Kagga by D.V. Gundappa
ಹೇಮಕುಂಭದಿ ಕೊಳಚೆರೊಚ್ಚುನೀರ್ಗಳ ತುಂಬಿ । ರಾಮನೀಯಕದೊಳಿಟ್ಟಾಮಗಂಧವನು ॥ ಪ್ರೇಮಪುಷ್ಪಕೆ ಮೊನಚು ಗರಗಸವನಂಚಿರಿಸಿ । ಏಂ ಮಾಡಿದನೊ ಬೊಮ್ಮ! - ಮಂಕುತಿಮ್ಮ ॥ ೪೧೭ ॥
hEmakumbhadi koLacherochchunIrgaLa tumbi । rAmanIyakadoLiTTAmagandhavanu ॥ prEmapuShpake monachu garagasavanancharisi । Em mADidano bomma! - Mankutimma ॥ 417 ॥
ಸೃಷ್ಟಿಯಲ್ಲಿ ಬಂಗಾರದಂತ ಅಮೂಲ್ಯ ವಸ್ತುವಿನೊಳಗೆ ಕೊಳಚೆ ರೊಚ್ಚೆಯಂತಹ ಹೊಲಸನ್ನು ತುಂಬಿ, ಅತೀ ಸುಂದರವಾದ ಪ್ರಾಣಿಯೊಳಗೆ ಕೀವು, ಮಲ ಮುಂತಾದ ದುರ್ನಾತದ ವಸ್ತುಗಳನ್ನು ಸೇರಿಸಿ, ದೂರದಿಂದ ಸುಂದರವಾಗಿ ರಮಣೀಯವಾಗಿ ಕಾಣುವ ಹೂವಿನ ಕಾಂಡದಲ್ಲಿ ಮೊನಚಾದ, ಚುಚ್ಚುವ ಮುಳ್ಳುಗಳನ್ನು ಇಟ್ಟು, ಈ ಜಗತ್ತನ್ನು ಏಕೆ ಸೃಷ್ಟಿಸಿದನೋ ಆ ಪರಬ್ರಹ್ಮ ಎಂದು ಪರಸ್ಪರ ವಿರೋಧಗಳ,ಸಹ ವಾಸ್ತವ್ಯವನ್ನು ವಿಶ್ಲೇಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
What has this creator made? He has kept dirty (mixed with waste and mire) water in a golden pot. He has given bad smell (of meat and death) to a beautiful thing. He has given love razor sharp edges. Oh! What an irony! - Mankutimma
Video Coming Soon
Detailed video explanations by scholars and experts will be available soon.