Mankutimmana Kagga by D.V. Gundappa
ಕಲ್ಮಷದ ವಲ್ಮೀಕವೆಂದೊಡಲ ಜರೆಯದಿರು । ಬ್ರಹ್ಮಪುರಿಯೆಂದದನು ಋಷಿಗಳೊರೆದಿಹರು ॥ ಹಮ್ಮುಳ್ಳ ಹಯವ ಕಾಪಿಟ್ತು ಕಡಿವಣ ತೊಡಿಸೆ । ನಮ್ಮ ಗುರಿಗೈದಿಪುದು - ಮಂಕುತಿಮ್ಮ ॥ ೩೯೬ ॥
kalmaShada valmIkavendoDala jareyadiru । brahmapuriyendadanu RuShigaLorediharu ॥ hammuLLa hayava kApiTTu kaDivaNa toDise । namma gurige aidipudu - Mankutimma ॥ 396 ॥
ನಮ್ಮ ದೇಹವನ್ನು ಕೊಳೆಯ ಹುತ್ತವೆನ್ನಬೇಡಿ. ನಮ್ಮ ಋಷಿ ಮುನಿಗಳು ಈ ದೇಹವನ್ನು ಪರಮಾತ್ಮನ ಆವಾಸಸ್ಥಾನವೆಂದಿದ್ದಾರೆ. ಚೆನ್ನಾಗಿ ಬೆಳೆಸಿ, ರಕ್ಷಿಸಿ, ಕಡಿವಾಣ ತೊಡಿಸಿ ಓಡಿಸಿದರೆ ತನ್ನ ಗುರಿಮುಟ್ಟುವ ಒಳ್ಳೆಯ ಕುದುರೆಯಂತೆ, ನಾವೂ ಸಹ ನಮ್ಮ ದೇಹವನ್ನು ರಕ್ಷಿಸಿಕೊಂಡು ದೃಢವಾಗಿಟ್ಟುಕೊಂಡು ತನ್ಮೂಲಕ ಸಾಧನೆಗೈದರೆ, ನಮ್ಮ ಗಮ್ಯವಾದ ಪರಮಾತ್ಮನನ್ನು ಮುಟ್ಟಬಹುದು ಎಂದು ದೇಹಾತ್ಮ ಸಂಬಂಧವನ್ನು ವಿಮರ್ಶೆಮಾಡಿದ್ದಾರೆ, ಮಾನ್ಯ ಗುಂಡಪ್ಪನವರು.
"Don't berate teh body as an ant hill (snake's house) full of impurities (and poison). The ancient sages have proclaimed it as the abode of the Creator himself. If one can keep the energetic horse under control, the he can go to places. We can definitely reach our goals. We have five horses (senses)." - Mankutimma
Video Coming Soon
Detailed video explanations by scholars and experts will be available soon.