Back to List

Kagga 342 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪೂಸರದಿ ಕಾಂತಿ ಸೌರಭ ಮೊದಲನೆಯ ತಾಸು । ವಾಸನೆಯ ಹಳಸು ಕೊಳಕೊಳಚೆಯಾ ಬಳಿಕ ॥ ಮಾಸಿ ನಲುನಲುಗಿ ಮುಳ್ಳಹುದು ಮೂರನೆ ತಾಸು । ಸಂಸಾರಕಥೆಯದುವೆ - ಮಂಕುತಿಮ್ಮ ॥ ೩೪೨ ॥

pUsaradi kAnti saurabha modalaneya tAsu । vAsaneya haLasu koLakoLacheyA baLika ॥ mAsi nalunalugi muLLahudu mUrane tAsu । samsAra katheyu aduve - Mankutimma ॥ 342 ॥

Meaning in Kannada

ಆಗತಾನೆ ಪೋಣಿಸಿದ ಹೂಮಾಲೆಯಲ್ಲಿ ನವ ನವೀನತೆ ಇರುತ್ತದೆ ಮತ್ತು ಪರಿಮಳದ ಘಮಲು ಎಲ್ಲೆಲ್ಲೂ ಪಸರಿಸುತ್ತದೆ. ಆದರೆ ಸ್ವಲ್ಪ ಸಮಯದ ಬಳಿಕ ಅದು ಬಾಡುತ್ತಾ ತನ್ನ ಸುಗಂಧ ಮತ್ತು ನಾವೀನ್ಯವನ್ನು ಕಳೆದುಕೊಳ್ಳುತ್ತದೆ. ಸಮಯ ಕಳೆದಂತೆ ನಲುಗಿ, ಕೊಳೆತು ಸುಗಂಧ ದುರ್ಗಂಧಕ್ಕೆ ಎಡೆಮಾಡಿಕೊಡುತ್ತದೆ. ಸಂಜೆಯಹೊತ್ತಿಗೆ ಅದರ ವಾಸನೆ ಅಸಹನೀಯವಾಗಿ ಬಿಸುಡುವ ಮನಸ್ಸಾಗುತ್ತದೆ. ನಮ್ಮೆಲ್ಲರ ಜೀವನದ ಕಥೆಯೂ ಇಷ್ಟೇ ಎಂದು ಬದುಕಿನ ವಾಸ್ತವಿಕತೆಯನ್ನು ಉಪಮಾ ಸಹಿತ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"In the first hour, a garland of flowers will have lusture and fragrance. In the next hour, it will rot and stink. In the third hour, it will dry and prick us like a thorn. The story of the world is also thus." - Mankutimma

Themes

LifeNature

Video Section

Video Coming Soon

Detailed video explanations by scholars and experts will be available soon.