Back to List

Kagga 341 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕ್ಷೀರಾನ್ನದಿಂದೆ ನರಪುಷ್ಟಿ; ಹಸುವಿಂ ಪಾಲು । ಪೈರು ಬೆಳಸಿಂದೆ ಹಸು; ಪೈರುಗಳ್ಗೂರ ॥ ಸಾರದಿಂ ಪುಷ್ಟಿ; ಇಂತುಣಿಸುಮುಂಬನುಮೊಂದು । ಪಾಲೇನು? ಪೇಲೇನು? - ಮಂಕುತಿಮ್ಮ ॥ ೩೪೧ ॥

kShIra annadinde narapuShTi; hasuvim pAlu । pairu beLesinde hasu; pairugaLge Ura ॥ sAradim puShTi; intu uNisuM ombanum ondu । pAlEnu? pElEnu? - Mankutimma ॥ 341 ॥

Meaning in Kannada

ಹಾಲಿನಿಂದ ನರರಿಗೆ ಪೌಷ್ಟಿಕತೆ ದೊರೆಯುತ್ತದೆ. ಆ ಹಾಲನೀಯುವ ಹಸುವಿಗೆ ಹಸಿರು ಪೈರು,ಹುಲ್ಲು ಮತ್ತು ಕಾಳುಗಳಿಂದ ಪೌಷ್ಟಿಕತೆ ಸಿಗುತ್ತದೆ. ಆ ಪೈರುಗಳಿಗೆ ಬೆಳೆಯುವ ಭೂಮಿಗೆ ಊರಜನರ ತ್ಯಾಜ್ಯದಿಂದ ಸಾರ ಅಥವಾ ಪೌಷ್ಟಿಕತೆ ಸಿಗುತ್ತದೆ.ಹೀಗೆ ಒಂದಕ್ಕೊಂದು ಅಧಾರಪಟ್ಟಿರುವಾಗ, ಹಾಲು ಉತ್ತಮ ಮಲ ಅಧಮ ಎನ್ನುವುದು ಏಕೆ? ಸಮಗ್ರತೆಯ ಕಾಣು ಎನ್ನುವಂತೆ ಈ ಜಗತ್ತಿನ ಎಲ್ಲಕ್ಕೂ ಮತ್ತೊಂದರ ಮೇಲಿನ ನಿರ್ಭರತೆಯ ಚಿತ್ರಣವನ್ನು ನಮಗೆ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Rice mixed in milk is good for man's body. Milk comes from the cow. Cow grows well when it eats the grass. For grass, the nutrition comes from soil of the village that is mixed with cow's waste. The whole nature is thus filled with such relationships of provider and comsumers. Every being's produce becomes food for the next. What is then the difference between milk or dung?" - Mankutimma

Themes

MoralityNatureSociety

Video Section

Video Coming Soon

Detailed video explanations by scholars and experts will be available soon.