Back to List

Kagga 293 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ದರಿಯಿರದೆ ಗಿರಿಯಿಲ್ಲ, ನೆರಳಿರದೆ ಬೆಳಕಿಲ್ಲ । ಮರಣವಿಲ್ಲದೆ ಜನನಜೀವನಗಳಿಲ್ಲ ॥ ವರಗುಣೋನ್ನತಿಗೆ ನಿಮ್ನಗುಣಂಗಳೊಡವುಟ್ಟು । ತೆರೆ ಬೀಳದೇಳುಳುವುದೆ?- ಮಂಕುತಿಮ್ಮ ॥ ೨೯೩ ॥

dariyirade giriyilla, neraLirade beLakilla । maraNAvillade jananajIvanagaLilla ॥ varaguNOnnatige nimnaguNangaLoDavuTTu । tere bILadELuvude? - Mankutimma ॥ 293 ॥

Meaning in Kannada

ಈ ಭೂಮಿಯಲ್ಲಿ ಕಣಿವೆಗಳಿಲ್ಲದೆ ಬೆಟ್ಟಗಳು ಇರಲು ಸಾಧ್ಯವಿಲ್ಲ. ನೆರಲಿಲ್ಲದೆ ಬೆಳಕಿರಲು ಸಾಧ್ಯವಿಲ್ಲ. ಮರಣವಿಲ್ಲದೆ ಜನನ ಮತ್ತು ಜೀವನಗಳಿಲ್ಲ. ಹಾಗೆಯೇ ಮನುಷ್ಯನೂ ಸಹ ತನ್ನ ಮನಸ್ಸು ಬುದ್ಧಿಗಳಲ್ಲಿ ಕೆಲಬಾರಿ ಒಳ್ಳೆಯಗುಣಗಳಿಂದ ಔನ್ನತ್ಯದಲ್ಲಿರುತ್ತಾನೆ ಮತ್ತೆ ಕೆಲವು ಬಾರಿ ನೀಚ ಗುಣಗಳಿಂದ ಅದೋಗತಿಯಲ್ಲಿರುತ್ತಾನೆ.ಹೇಗೆ ಸಮುದ್ರದಲ್ಲಿನ ಮೇಲೆದ್ದ ತೆರೆಗಳು ಕೆಳಗೆ ಬೀಳುತ್ತವೆಯೋ ಹಾಗೆಯೇ ಮನುಷ್ಯನ ಗುಣಗಳೂ ಸಹ ಎಂದು ಮನುಷ್ಯನ ಮನಸಿನ ಗುಣಗಳನ್ನು ಹಲವು ಉಪಮೆಗಳೊಂದಿಗೆ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"There are no mountains without valleys. There can not be light without shadows. If people never died, there would be no life or births.For every virtue, there is a vice. A tide cannot rise before having fallen before (and vice-versa)." - Mankutimma

Themes

LifeDeathMoralitySociety

Video Section

Video Coming Soon

Detailed video explanations by scholars and experts will be available soon.