Mankutimmana Kagga by D.V. Gundappa
ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೊ? । ಸುರರಟ್ಟಹಾಸದಿನೆ ನರಭಕ್ತಿಯೊರಲೋ? ॥ ಪರಿಕಿಸುವರೇನವರ್ಗಳನ್ಯೋನ್ಯಶಕ್ತಿಗಳ? । ಧರುಮವೆಲ್ಲಿದರಲ್ಲಿ? - ಮಂಕುತಿಮ್ಮ ॥ ೨೪ ॥
narara bhayabayakegaLe surara taytandegaLo? । suraraTTahAsadine narabhaktiyoralO? ॥ parikisuvarEnu avargaL anyOnya shaktigaLA? । dharuma elli idaralli? - Mankutimma ॥ 24 ॥
ಮನುಷ್ಯರ ಬಯಕೆಗಳೇ ಈ ದೇವತೆಗಳಿಗೆ ತಂದೆ ತಾಯಿಗಳೋ ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು. ಹೌದಲ್ಲವೇ ಈ ವಿಶ್ವದ ಎಲ್ಲವನ್ನೂ ಸೃಷ್ಟಿಸಿ ನಡೆಸಿಕೊಂಡು ಹೋಗುವ ಆ ಪರಮಾತ್ಮನಾಗಿರುವಾಗ, ಮನುಷ್ಯರು ತಮ್ಮ ತಮ್ಮ ಸಣ್ಣ ಸಣ್ಣ ಬಯಕೆಗಳನ್ನು ಈಡೇರಿಸಿಕೊಳ್ಳಲು ಬೇರೆ ಬೇರ ದೇವತೆಗಳನ್ನು ಸೃಷ್ಟಿಸಿಕೊಂಡಿರುವುದರಿಂದ, ಅವರಿಗೆ ನಮ್ಮ ಬಯಕೆಗಳೇ ತಂದೆ ತಾಯಿಗಳ ಸ್ಥಾನದಲ್ಲಿರುವುದು ತತ್ಯವಲ್ಲವೇ? ಇದನ್ನೇ ಶ್ರೀ ಗುಂಡಪ್ಪನವರು ಹೇಳುತ್ತಾರೆ. ವಿದ್ಯೆಗೆ ಒಂದು ದೇವತೆ, ಹಣಕ್ಕೆ ಒಂದು ದೇವತೆ, ಮಳೆಗೆ ಒಂದು ದೇವತೆ, ಗಾಳಿಗೊಂದು ದೇವತೆ. ನಮಗೆ ಗಿಡ ಮರ ಬಳ್ಳಿಗಳೂ ನದಿ ಬೆಟ್ಟ ಕಾಡುಗಳೂ, ಎಲ್ಲವೂ ದೇವತಾ ಸ್ವರೂಪವೇ. ಹಾಗಾಗಿ ನಾವೇ ನಮ್ಮ ಕಲ್ಪನಾ ಶಕ್ತಿಯಿಂದ, ಆ ಪರಮಾತ್ಮನ ಸೃಷ್ಟಿ ಎಲ್ಲಕ್ಕೂ ದೇವತಾ ರೂಪವನ್ನು ಕೊಟ್ಟಿರುವುದರಿಂದ, ಮನುಷ್ಯರ ಬಯಕೆಗಳೇ ದೇವತೆಗಳಿಗೆ ತಂದೆ ತಾಯಿ ಸ್ಥಾನದಲ್ಲಿದ್ದಾವೆ, ಎಂದು ಗುಂಡಪ್ಪನವರು ಹೇಳುತ್ತಾರೆ.
Are Gods born out of human fears and desires? Or is human devotion only due to the arrogance (and tyranny) of Gods? Or are Gods troubling us in order to settle scores among themselves? Where is the concept of fairness here? - Mankutimma
Video Coming Soon
Detailed video explanations by scholars and experts will be available soon.