Mankutimmana Kagga by D.V. Gundappa
ರಾವಣನ ದಶಶಿರವದೇಂ? ನರನು ಶತಶಿರನು । ಸಾವಿರಾಸ್ಯಗಳನೊಂದರೊಳಣಗಿಸಿಹನು ॥ ಹಾವಾಗಿ ಹುಲಿಯಾಗಿ ಕಪ್ಪೆ ಹುಲ್ಲೆಯುಮಾಗಿ । ಭೂವ್ಯೊಮಕತಿಶಯನು - ಮಂಕುತಿಮ್ಮ ॥ ೨೦೨ ॥
rAvaNana dashashiravadEm? naranu shata shiranu । sAvira AsyagaLanu ondaroLa aNagisihanu ॥ hAvAgi huliyAgi kappe hulleyum Agi । bhU vyomake atishayanu - Mankutimma ॥ 202 ॥
ರಾವಣನಿಗೆ ಹತ್ತು ತಲೆಗಳಿರಬಹುದು. ಆದರೆ ನಮ್ಮ ಮನುಷ್ಯನಿಗೆ ನೂರಾರು ತಲೆಗಳು. ಸಾವಿರ ಮುಖಗಳನ್ನು ಒಂದೇ ಮುಖದಲ್ಲಿ ಅಡಗಿಸಿಟ್ಟುಕೊಂಡು ಪ್ರದರ್ಶಿಸುವ ಕ್ಷಮತೆ ಇರುವವನು ಮನುಷ್ಯ. ಹಾವಾಗಿ, ಹುಲಿಯಾಗಿ, ಕಪ್ಪೆ, ಜಿಂಕೆಯಾಗಿಯೂ ತನ್ನ ಗುಣಗಳನ್ನು ತೋರುವ ಈ ಮನುಷ್ಯ ಇಡೀ ಜಗತ್ತಿನಲ್ಲಿ ಅತಿಶಯದ ಪ್ರಾಣಿ ಎಂದು ಉಲ್ಲೇಖಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ
"What is so great about Ravana having ten heads? Any man had hundred heads. He has thousand cunning minds all hidden inside one. He can be at times like a snake (slippery), a tiger (dangerous) or a deer (docile). There is no other being in this world - earth and sky - that comes close to his ability." - Mankutimma
Video Coming Soon
Detailed video explanations by scholars and experts will be available soon.