Mankutimmana Kagga by D.V. Gundappa
ಉರಿಯುತಿರೆ ಹೊಟ್ಟೆಕಿಚ್ಚಾರಿಸಲು ನೀರೆಲ್ಲಿ? । ನರಕವೆದೆಯಲಿ ನೆಲಸೆ ನಿದ್ದೆಗೆಡೆಯೆಲ್ಲಿ? ॥ ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ? । ಕರುಬಿದನ ಹರಿ ಪೊರೆಗೆ - ಮಂಕುತಿಮ್ಮ ॥ ೨೦೧ ॥
uriyutire hoTTe kichchu Arisalu nIrelli? । narakavu edeyali nelase niddege eDeyelli? ॥ harisalappude nararu matsariya sankaTava? । karubu idana hari porege - Mankutimma ॥ 201 ॥
ಹೊಟ್ಟೆಯುರಿಯನ್ನು ಆರಿಸಲು ನೀರು ಎಲ್ಲಿಹುದು? ನರಕದಂಥ ಹಿಂಸೆಯನ್ನು ನೀಡುವ ಈ ಅಸೂಯೆ ಎನ್ನವ ಉರಿ ಹೃದಯದಲಿ ನೆಲೆಸಿರುವಾಗ, ನಿದ್ದೆ ಬರಲು ಹೇಗೆ ಸಾಧ್ಯ. ಮತ್ಸರ ಪಡುವವನ ಸಂಕಟವನ್ನು ಯಾರಾದರೂ ನಿವಾರಿಸಲು ಸಾಧ್ಯವೇ? ಅಂತಹವನನ್ನು ಆ ದೇವರೇ ಕಾಪಾಡಬೇಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Is there water that can dowse this fire of jealousy? If hell resides in our mind, then where is the question of sleep (or peace)? Can man ever vanquish this discomfort of jealousy? Only God can help us to curb this feeling." - Mankutimma
Video Coming Soon
Detailed video explanations by scholars and experts will be available soon.