Mankutimmana Kagga by D.V. Gundappa
ದೈವವೆನಿಸಿರುತೆ ವಿಶ್ವಪ್ರಕೃತಿಶಕ್ತಿಯಲಿ । ಜೀವವಾಸನೆಗಳಲಿ ಪೂರ್ವಕೃತವೆನಿಸಿ ॥ ಧೀವರ್ತನೆಯಲಿ ಪೌರುಷವೆನಿಸಿ ಪರಸತ್ತ್ವ । ತ್ರೈವಿಧದೊಳಿರುತಿಹುದು - ಮಂಕುತಿಮ್ಮ ॥ ೧೫೧ ॥
daivavu enisirute vishva prakRuti shaktiyali । jIva vAsanegaLali pUrvakRutavenisi ॥ dhIvartaneyali pauruShavenisi parasattva । traividhadoLu irutihudu - Mankutimma ॥ 151 ॥
ಪರಮಾತ್ಮ ಈ ಜಗತ್ತನ್ನು ಸೃಷ್ಟಿಸಿ ಪ್ರಕೃತಿಯ ಮೂಲಕ ಇದನ್ನು ನಡೆಸುತ್ತಾನೆ. ಈ ಜಗದ ಜೀವಿಗಳು, ತಮ್ಮ ಪೂರ್ವ ಮತ್ತು ಪೂರ್ವಜನ್ಮದ ವಾಸನಾ ಪ್ರೇರಿತ ಕರ್ಮಗಳ ಅನುಸಾರವಾಗಿ ತಮ್ಮ ಜೀವನ ನಡೆಸುತ್ತಿದ್ದಾರೆ. ಜೀವಿಗಳು ತಮ್ಮ ತಮ್ಮ ಪೂರ್ವಕರ್ಮಗಳನ್ನು ತಿದ್ದಿಕೊಂಡು ಮುನ್ನಡೆಯಲು “ಧೀ” ಅಂದರೆ ವಿವೇಚನಾ ಶಕ್ತಿಯನ್ನೂ ಕೊಟ್ಟಿದ್ದಾನೆ. ಹೀಗೆ ಪರಮಾತ್ಮ, ಪ್ರಕೃತಿ ಮತ್ತು ಜೀವಿಗಳ ಧೀ ಶಕ್ತಿಗಳ ಬಲದಿಂದಲೇ ಈ ಜಗದ್ವ್ಯಾಪಾರ ನಡೆಸುತ್ತಾನೆ ಎಂದು ಪ್ರಸ್ತಾಪಸಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"The cosmic spirit is spoken about in three ways - When it comes to creation of the world; it is called providence. When it comes to the way it makes people behave, it is called as karma (or results of prior actions). Refferring to acts of mind, it is called as Man's effort." - Mankutimma
Video Coming Soon
Detailed video explanations by scholars and experts will be available soon.