Back to List

Kagga 130 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ರಾಮನಡಿಯಿಟ್ಟ ನೆಲ,ಭೀಮನುಸಿರಿದ ಗಾಳಿ । ವ್ಯೋಮದೆ ಭಗೀರಥಂ ತಂದ ಸುರತಟಿನಿ ॥ ಸೋಮನಂ ಪೆತ್ತ ಕಡಲೀ ಪುರಾತನಗಳಿರೆ । ನಾಮೆಂತು ಹೊಸಬರೆಲೊ - ಮಂಕುತಿಮ್ಮ ॥ ೧೩೦ ॥

rAmanaDiyiTTa nela, bhImanusirida gALi। vyOmade bhagIratham tanda surataTini ॥ sOmanam petta kaDalI purAtanagaLire । nAmentu hosabarelo- Mankutimma ॥ 130 ॥

Meaning in Kannada

ರಾಮನು ನಡೆದಾಡಿದ ನೆಲ, ಭೀಮನು ಉಸಿರಾಡಿದ ಈ ಭೂಮಿ, ದಿವಿಯಿಂದ ಭಗೀರಥ ಈ ಭೂಮಿಗೆ ತಂದ ಆಕಾಶ ಗಂಗೆ, ಸಮುದ್ರ ಮಂಥನದಲ್ಲಿ ಕ್ಷೀರಸಾಗರದಲ್ಲಿ ಹುಟ್ಟಿದ ಆ ಚಂದ್ರ ಇವೆಲ್ಲವೂ ಪುರಾತನವೇ ಆಗಿರಲು, ನಾವು ಹೇಗೆ ಈ ಭೂಮಿಯಲ್ಲಿ ಹೊಸಬರಾಗುತ್ತೇವೆ ಎಂದು ಒಂದು ಪ್ರಶ್ನೆಯನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.

Meaning & Interpretation

"This is the same world that existed eons ago. We still have the earth on which Lord Rama walked in Treta yuga. We still have the same air that Bheema breathed in Dwapara yuga. The river Ganga that Bhagiratha brought from heaven to earth is still flowing. The ocean that gave birth to the Moon (during the divine churning) is still around. How is that we are 'new'?" - Mankutimma

Themes

DevotionLifeNature

Video Section

Video Coming Soon

Detailed video explanations by scholars and experts will be available soon.