Back to List

Kagga 129 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಧರೆಯ ನೀರ್ಗಾಗಸದ ನೀರಿಳಿದು ಬೆರವಂತೆ । ನರನ ಪ್ರಾಕ್ತನಕೆ ನೂತನಸತ್ತ್ವ ಬೆರೆತು ॥ ಪರಿವುದೀ ವಿಶ್ವಜೀವನಲಹರಿಯನವರತ । ಚಿರಪ್ರತ್ನನೂತ್ನ ಜಗ - ಮಂಕುತಿಮ್ಮ ॥ ೧೨೯ ॥

dhareya nIrge Agasada nIriLidu berevante । narana prAktanake nUtanasattva beretu ॥ parivudI vishva jIvana lahariyu anavarata । chira pratna nUtna jaga- Mankutimma ॥ 129 ॥

Meaning in Kannada

ಭೂಮಿಯ ನೀರಿಗೆ ಆಗಸದ ಮಳೆಯ ನೀರು ಇಳಿದು ಬೆರಯುವಂತೆ, ಮನುಷ್ಯನ ಪುರಾತನತೆಗೆ ನೂತನತ್ವ ಬೆರೆತು ನಿರಂತರವಾಗಿ ಹರಿಯುವುದು ಈ ಜೀವನ ಲಹರಿ, ಹಾಗಾಗಿ ಹಳತು ಮತ್ತು ಹೊಸತದರ ನಿರಂತರ ಸಮ್ಮಿಲನವೇ ಈ ಜಗತ್ತು ಎಂದು ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ ಈ ಕಗ್ಗದಲ್ಲಿ.

Meaning & Interpretation

"Pure water from the sky comes down to the earth and mixes with water on earth. Similarly, energy from the cosmic spirit mixes with that of the man and keeps the stream of life on this earth flowing forever. This world is permanent - with somethings old, and some things old." - Mankutimma

Themes

LifeNature

Video Section

Video Coming Soon

Detailed video explanations by scholars and experts will be available soon.