Mankutimmana Kagga by D.V. Gundappa
ಸಚ್ಚಿದಾನಂದಂಗಳಾತ್ಮ ಸ್ವಭಾವ ರಸ । ಬಚ್ಚಿಡುವುದದನು ಜೀವಿತೆಯ ಮಾಯಿಕತೆ॥ ಇಕ್ಷುವೊಲ್ ಜೀವ; ಗಾಣದವೊಲ್ ಜಗನ್ಮಾಯೆ । ನಿಚ್ಚವಿಳೆಯಾಲೆಮನೆ - ಮಂಕುತಿಮ್ಮ ॥ ೧೨೫ ॥
sat chit AnandamgaLu Atma svabhAva rasa । bacchiDuvudadanu jIviteya mAyikate ॥ ikShuvol jIva; gANadavol jaganmAya । nicchaviLe Alemane - Mankutimma ॥ 125 ॥
ಆತ್ಮದ ಗುಣ ಸಚ್ಚಿದಾನಂದ. ಆದರೆ ಈ ಇಂದ್ರಿಯ ಸಂಪರ್ಕದಿಂದ ಉಂಟಾದ ನಮ್ಮ ಬದುಕಿನ ಮಾಯೆ ಅದನ್ನು ಮುಚ್ಚಿಡುವುದು. ಜೀವ, ರಸ ತುಂಬಿದ ಕಬ್ಬಿಣ ಜಲ್ಲೆ ಇದ್ದಂತೆ. ಈ ಜಗತ್ತಿನ ಮಾಯೆ ಗಾಣದ ರೀತಿ. ಹೀಗೆ ಶುದ್ಧರಸ ತುಂಬಿದ ಆತ್ಮವನ್ನು ಮಾಯೆಯಂಬ ಗಾಣದಲ್ಲಿ ಇರುಕಿಸಿ ಹಿಂಡಿ ಹಿಂಡಿ ನಿತ್ಯ ನಡೆಯುವ ಈ ಜಗತ್ತಿನ ಆಲೆಯಮನೆಯಲ್ಲಿ ಪಾಕ ತೆಗೆಯುವುದೇ ಜೀವನ ಎನ್ನುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"sat, chit and ananda are the inherent essential qualities of the atma. The life that we lead will put a veil on them and prevent us from seeing them. That is the reason we seek those qualities in the outside world. Life is like a sugar-cane, hiding the juice in it. We have to extract the pure essence (sat, chit and ananda) by subjecting it to the crusher machine. i.e. by leading this worldly life. This world is the sugar-cane-juice-extracting-factory." - Mankutimma
Video Coming Soon
Detailed video explanations by scholars and experts will be available soon.