Mankutimmana Kagga by D.V. Gundappa
ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ । ಮಾನವಂ ಪ್ರಣಯದೊಳೊ ವೀರ ವಿಜಯದೊಳೋ ॥ ಎನೊ ಎಂತೋ ಸಮಾಧಾನಗಳನರಸುತಿಹ । ನಾನಂದವಾತ್ಮಗುಣ - ಮಂಕುತಿಮ್ಮ ॥ ೧೨೪ ॥
maunadoLo mAtinoLo hAsyadoLo hADinoLo । mAnavam praNayadoLo vIra vijayadoLO ॥ eno entO samAdhAnagaLanu arasutihanu । Anandavu AtmaguNa - Mankutimma ॥ 124 ॥
ನಾವು ಸದಾ ಕಾಲ ಮೌನವಾಗಿಯೋ, ಮಾತನಾಡುತ್ತಲೋ, ಹಾಸ್ಯವಾಡುತ್ತಲೋ, ಹಾಡುತ್ತಲೋ, ಕೋಪಗೊಳ್ಳುತ್ತಲೋ, ಪ್ರಣಯದಲ್ಲೋ, ವೀರತ್ವದಲ್ಲೋ ಅಥವಾ ಗೆಲುವಿನ ಸಂಭ್ರಮದಲೋ ಯಾವುದಾದರೂ ವಿಧದಿಂದ ಸಮಾಧಾನ ಸಂತೋಷಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ. ನಮ್ಮನ್ನು ಸದಾ ಕಾಲ ಸಕ್ರಿಯವಾಗಿಸಿರುವ ಆ ಪರಮ ಚೇತನವು ನಮ್ಮ ಮೂಲಕ ಈ ಎಲ್ಲ ಭಾವಗಳನ್ನೂ ಅನುಭವಿಸುತ್ತಾ ಇರುವುದೇ ಆತ್ಮನ ನಿಜವಾದ ಗುಣ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Man seeks happiness always. Some seek it in silence, in conversation, in comedy, in music, in romance, in victory. What offers solace to one's perturbed mind is different for different people. Why does he do all these when 'ananda' (happiness) is the nature of the atma (soul) in him." - Mankutimma
Video Coming Soon
Detailed video explanations by scholars and experts will be available soon.