Back to List

Kagga 110 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹಿಮಗಿರಿಯ ಕಂಡಂಗೆ ಕ್ರಿಮಿಯ ಹಿರಿಮೆಯದೇನು? । ಕ್ರಿಮಿಗೆ ಹಸಿವುಂಟಿನಿತು ಬೆದಕಾಟವುಂಟು ॥ ಅಮಿತ ಸಂತತಿಯುಂಟು ಹಿಮಗಿರಿಯ ಸಮಯುಗದ । ಕ್ರಿಮಿಪಂಕ್ತಿ ಕಿರಿದಹುದೆ? - ಮಂಕುತಿಮ್ಮ ॥ ೧೧೦ ॥

himagiriya kanDange krimiya hirimeyadEnu? । krimige hasivunTu initu bedakATavunTu ॥ amita santatiyunTu himagiriya samayugada । krimipankti kiridahude? - Mankutimma ॥ 110 ॥

Meaning in Kannada

ಹಿಮಾಲಯ ಪರ್ವತವನ್ನು ಕಂಡವನಿಗೆ ಒಂದು ಸಣ್ಣ ಕ್ರಿಮಿ ಯಾವ ಲೆಕ್ಕ? ಆದರೆ ಕ್ರಿಮಿಗೆ ಸಂತತಿ ಉಂಟು, ಹಸಿವುಂಟು, ಬೆದಕಾಟವುಂಟು. ಹಿಮಾಲಯವು ಎಂದಿನಿಂದ ಇದೆಯೋ ಅಂದಿನಿಂದ ಕ್ರಿಮಿಯ ಅನಂತ ಸಂತತಿಯೂ ಉಂಟು. ಕ್ರಿಮಿಗಳು ಎಷ್ಟಿವೆಯೆಂದರೆ ಕ್ರಿಮಿ ಸಂತತಿಯನ್ನು ಒಟ್ಟು ಮಾಡಿದರೆ , ಅದು ಹಿಮಾಲಯಕ್ಕಿಂತ ದೊಡ್ಡದಾಗಬಹುದು. ಹಾಗಾಗಿ ಕ್ರಿಮಿ ಪಂಕ್ತಿ ಕಿರಿಯದಲ್ಲವೆಂದು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

If a person has seen the snow capped mountains, what greatness will he see in a mere bacteria? The bacteria though, has life, hunger and urge to go places in search of food. It has (the cumulative intelligence of) infinite lineage of bacteria that came before it; perhaps the as old as the mighty mountains. Is this legacy of bacteria any smaller than that of the mountain? - Mankutimma.

Themes

Life

Video Section

Video Coming Soon

Detailed video explanations by scholars and experts will be available soon.