Mankutimmana Kagga by D.V. Gundappa
ಶಿಲೆಯಾಗಿ ನಿದ್ರಿಸುತ್ತಿರ್ದಾಕೆ ರಾಮಪದ । ತಲದ ಸಂಸ್ಪರ್ಶದಿಂದೆದ್ದು ನಿಂತಂತೆ ॥ ಚಲಿಸದೆನಿಸಿದ ಜಡವನಾವ ಗಾಳಿಯೊ ಸೋಕೆ । ಬಲ ತೀವಿ ಚಲಿಪುದದು - ಮಂಕುತಿಮ್ಮ ॥ ೧೦೯ ॥
shileyAgi nidrisuttirdAke rAmapada । talada samsparshadinda eddu nintante ॥ chalisadu enisida jaDavanu Ava gALiyo sOke । bala tIvi chalipudu adu - Mankutimma ॥ 109 ॥
ಶಾಪಗ್ರಸ್ತಳಾಗಿ, ಕಲ್ಲಾಗಿ ನಿದ್ರಿಸುತ್ತಿದ್ದ ಋಷಿಯ ಪತ್ನಿ ಅಹಲ್ಯೆ, ರಾಮನ ಪದ ಸೋಕಿ ಜೀವಂತವಾದಂತೆ, ಇದು ಚಲಿಸದು, ಇದು ಜಡ ಎಂದು ಯಾವುದು ಕರೆಯಲ್ಪಡುತ್ತದೋ ಅದು ಸತ್ವದ, ಚೈತನ್ಯದ, ಜೀವ ಶಕ್ತಿಯ ಸಂಸರ್ಗದಿಂದ, ಶಕ್ತಿಯನ್ನು ಪಡೆದು ಜೀವಂತವಾಗುತ್ತದೆ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
Ahalya had turned into stone due to a curse from her husband Gautama. She stayed as a stone unmoved till Rama touched it with his foot. She came back to life. We may think many such objects as lifeless just because it does not move. Such objects can come to life and move when some wind blows energy into it. - Mankutimma.
Video Coming Soon
Detailed video explanations by scholars and experts will be available soon.