ಪಟ್ಟಿಗೆ ಹಿಂತಿರುಗಿ

ಕಗ್ಗ 927 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ತೊಲಗು ನಿರ್ಜನದೆಡೆಗೆ; ತೊಲಗು ಮಸಣದ ಕಡೆಗೆ । ಒಲವ ಬೇಡಿಸದೆಡೆಗೆ; ಅಳುವು ಬರದೆಡೆಗೆ ॥ ವಿಲಯವಾಗಿಸಿ ಮನವನ್, ಅಲುಗಾಡಿಸದೆ ತುಟಿಯ । ತೊಲಗಿ ಮಲಗಲ್ಲಿ ನೀಂ - ಮಂಕುತಿಮ್ಮ ॥ ೯೨೭ ॥

tolagu nirjanadeDege; tolagu masaNada kaDege । olava bEDisadeDege; aLuvu baradeDege ॥ vilavAgisi manavan, alugADisade tuTiya । tolagi malagalli nIm - Mankutimma ॥ 927 ॥

ಕನ್ನಡದಲ್ಲಿ ಅರ್ಥ

ಯಾರೂ ಇಲ್ಲದ ಕಡೆಗೆ, ಸಾವಿನೆಡೆಗೆ ತೊಲಗು. ಯಾರಿಂದಲೂ ಪ್ರೀತಿ ಒಲವು ಬಯಸದ ಮತ್ತು ದುಃಖವಿಲ್ಲದ ಸ್ಥಿತಿಯಲ್ಲಿ ನಿನ್ನ ಮನಸ್ಸನ್ನು ಲಯಗೊಳಿಸು. ಮೌನದಿಂದ ನೀನು ಅಂತಹ ಸ್ಥಿತಿಯಲ್ಲಿ ಮಲಗು ಎಂದು ಆದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

Go to a place where there is no one. Go to the cemetery. Go to place where you will not get attached to. Go to a place where you will not feel sad. Dissolve your mind (into the soul of supreme conscious). Go and sleep there without even parting your lips. - Mankutimma

ವಿಷಯಗಳು

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.