ಪಟ್ಟಿಗೆ ಹಿಂತಿರುಗಿ

ಕಗ್ಗ 926 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ತೊಲಗೆಲವೊ ಮನೆಯಿಂದ ಮನವು ಬರಡಾದಂದೆ । ಹೊಲಸ ತೊಳೆಯಲು ತೋಳ್ಗೆ ಬಲ ಕುಗ್ಗಿದಂದೆ ॥ ತೊಲಗು ಜಗದಿಂ ದೂರ, ಇಳೆಗಾಗದಿರು ಭಾರ । ತೊಲಗಿ ನೀಂ ಮರೆಯಾಗು - ಮಂಕುತಿಮ್ಮ ॥ ೯೨೬ ॥

tolagelavo maneyinda manavu baraDAdande । holasa toLeyalu tOLge bala kuggidande ॥ tolagu jagadim dUra, iLege aagadiru bhAra । tolagi nIm mareyAgu - Mankutimma ॥ 926 ॥

ಕನ್ನಡದಲ್ಲಿ ಅರ್ಥ

ಮನಸ್ಸು ಬರಡಾದಂದು, ಮನದ ಹೊಲಸನ್ನು ತೊಳೆಯಲು ಶಕ್ತಿ ಕುಗ್ಗಿದರೆ, ಜಗಕ್ಕೆ ಮತ್ತು ಜಗದ ಜನರಿಗೆ ಭಾರವಾಗದೆ, ಮನೆ ಬಿಟ್ಟು ದೂರ ಯಾರಿಗೂ ಹೊರೆಯಾಗದ ಹಾಗೆ ಹೊರಟು ಬಿಡು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಅರ್ಥ ಮತ್ತು ವ್ಯಾಖ್ಯಾನ

One must leave his house when he stops feeling for the house, when he does not have the strength to clean up the mess. He must leave the world. He must never become a burden to the world. he must go away and disappear so that the world does not even remember him. - Mankutimma

ವಿಷಯಗಳು

LifeDetachmentLove

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.