ಪಟ್ಟಿಗೆ ಹಿಂತಿರುಗಿ

ಕಗ್ಗ 865 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಉರಿಯಾರಿ ಮಳೆಗರೆಯೆ ಮರಳಿ ಸಸಿಯೇಳಿವುದು । ಮರುಗನೊಂದುವುದು ಪೊನ್ ಪುಟ ಕಾದ ಬಳಿಕ ॥ ನರಜೀವವಂತು ಶುಚಿಯಹುದು ದುಃಖಾಶ್ರುವಿಂ । ತರುವಾಯ ಪುನರುದಯ - ಮಂಕುತಿಮ್ಮ ॥ ೮೬೫ ॥

uriyAri maLegareye maraLi sasiyELuvudu । maruganonduvudu pon kAda baLika ॥ nara jIvavum antu shuchiyahudu duHkhAshruvim । taruvAya punarudaya - Mankutimma ॥ 865 ॥

ಕನ್ನಡದಲ್ಲಿ ಅರ್ಥ

ಹಾಗೆ ಮನುಷ್ಯ-ಮನುಷ್ಯರ ನಡುವಿನ ಪಾಶವೀ ಪ್ರವೃತ್ತಿಯಿಂದ ಉಂಟಾದ ಹಗೆತನದಿಂದ, ‘ಸರ್ವನಾಶ’ವಾದರೂ,’ಶಾಶ್ವತನಾಶ’ವಾಗದೆ, ಬಿಸಿಲಿನ ದಗೆಗೆ ಉರಿದುಹೋದ ಇಳೆಯ ಸಸಿಗಳೆಲ್ಲಾ, ಬೇಸಿಗೆ ಕಳೆದು, ಮಳೆ ಬೀಳಲು ಮತ್ತೆ ಚಿಗುರುವಂತೆ, ಅಧಿಕ ಶಾಖದಲ್ಲಿ ಕಾಯಿಸಲ್ಪಟ್ಟ ಹೊನ್ನು ಮತ್ತೆ ಅಧಿಕ ಮೆರುಗಿನಿಂದ ಥಳಥಳಿಯುವಂತೆ, ತನ್ನ ಅಹಂಕಾರದ ಬೇಗೆಯಲ್ಲಿ ಬೆಂದ ಮಾನವ ಜೀವಿ, ಪಶ್ಚಾತ್ತಾಪದ ಕಣ್ಣೀರಿನಿಂದ, ಹಗುರಾಗಿ, ಶುದ್ಧನಾಗಿ ಮತ್ತೆ ಹೊಸತನವನ್ನು ತನ್ನ ಜೀವನದಲ್ಲಿ ತುಂಬಿಕೊಳ್ಳುತ್ತಾನೆ ಎಂದು ಉಲ್ಲೇಖಿಸಿದ್ದಾರೆ ಸನ್ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"When the summer heat subsides and earth receives showers, there will be fresh sprouts all around making everyone happy. Gold also gets its luster only after heated in the furnace. Our lives are also thus. It gets purified by the tears of misery. After that there will be a new beginning of happiness." - Mankutimma

ವಿಷಯಗಳು

Nature

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.