ಪಟ್ಟಿಗೆ ಹಿಂತಿರುಗಿ

ಕಗ್ಗ 864 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಜಗದ ಸೊಗದರಸಿಕೆಯ ಫಲ, ನೋಡು, ಬರಿ ಕಲಹ । ಮೃಗಗಳಾವೇಶಗೊಳಲಿಪ್ಪುದಿನ್ನೇನು? ॥ ಮುಗಿಯುವುದು ಕಾಳ್ಗಿಚ್ಚು ವನ ಬೂದಿಯಾದಂದು । ಹಗೆತನವುಮಂತು - ಮಂಕುತಿಮ್ಮ ॥ ೮೬೪ ॥

jagada sogada arasikeya phala, nODu, bari kalaha । mRugagaLa aavEshagoLalu ippudinnEnu? ॥ mugiyuvudu kALgichchu vana bUdiyAdandu । hagetanavum antu - Mankutimma ॥ 864 ॥

ಕನ್ನಡದಲ್ಲಿ ಅರ್ಥ

ಜಗತ್ತಿನಲ್ಲಿನ ಜೀವನದಲ್ಲಿ, ಸುಖ, ಸಂತೋಷ, ಆನಂದ ಮುಂತಾದವುಗಳ ಹುಡುಕುವಿಕೆಯಿಂದ ಕೇವಲ ಕಲಹ, ಜಗಳಗಳು ಉಂಟಾಗಿವೆ. ಪಾಶವೀ ಪ್ರವೃತ್ತಿಯಿಂದ ಮತ್ತೇನನ್ನು ತಾನೇ ಸಾಧಿಸಲು ಸಾಧ್ಯ? ಕಾಡಿನಲ್ಲಿನ ಬೆಂಕಿ ಕಾಡನ್ನು ಸಂಪೂರ್ಣ ಸುಟ್ಟು ಬೂದಿಯಾಗಿಸದ ಹೊರತು ತಣ್ಣಗಾಗುವುದಿಲ್ಲ. ಹಾಗಾಗಿ ಆನಂದದಿಂದ ಇರಬೇಕಾದರೆ ಹಗೆತನವನ್ನು ಬಿಡು ಎಂದು ಆದೇಶಮಾಡಿದ್ದಾರೆ ಗುಂಡಪ್ಪನವರು ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"What is the result of everyone in this world being in pursuit of happiness? See, It's just conflict. Man has engaged in conflict much like the animals every where. What else can be expected to happen then? The forest fire will cease only after turning the entire forest into ashes. Hatred is also thus." - Mankutimma

ವಿಷಯಗಳು

LifeNatureWarPeace

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.