ಪಟ್ಟಿಗೆ ಹಿಂತಿರುಗಿ

ಕಗ್ಗ 758 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಔದಾರ್ಯ ತಾಯಿ ನೀತಿಗೆ, ಧೈರ್ಯವೇ ತಂದೆ । ಸ್ವಾಧಿಪತ್ಯದೆ ನೀನು ಬಾಳನಾಳುವೊಡೆ ॥ ಹೋದುದನು ನೆನೆಯದಿರು, ಬರುವುದಕೆ ಸಿದ್ಧನಿರು । ಆದನಿತು ಸಂತೋಷ - ಮಂಕುತಿಮ್ಮ ॥ ೭೫೮ ॥

oudArya tAyi nItige, dhairyavE tande । svAdhipatyade nInu bALanALuvoDe ॥ hOdudanu neneyadiru, baruvudake niddhaniru । aadanitu santOSha - Mankutimma ॥ 758 ॥

ಕನ್ನಡದಲ್ಲಿ ಅರ್ಥ

ನಿನ್ನ ಬಾಳನ್ನು ನಿನ್ನಿಷ್ಟದಂತೆ ನೀನೇ ನಡೆಸಲಾದರೆ ನೀತಿಗೆ ಔದಾರ್ಯವೇ ತಾಯಿ, ಧೈರ್ಯವೇ ತಂದೆ. ಗತಿಸಿಹೋದದ್ದನ್ನು ನೆನೆಯದೆ ಮುಂಬರುವುದಕ್ಕೆ ಸದಾ ಸಿದ್ದನಿರು ಎಂದು ಹೇಳುತ್ತಾ ಬಾಳಿನ ಕೆಲವು ಸೂತ್ರಗಳನ್ನು ನಮಗೆ ಅರುಹಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು.

ಅರ್ಥ ಮತ್ತು ವ್ಯಾಖ್ಯಾನ

Morality has courage as father and magnanimity as mother. When you are in control of your life, you should not worry about what you have lost. You should be ready for whatever future has in store for you. In the process, if you can get some happiness, make full use of it. - Mankutimma

ವಿಷಯಗಳು

LifeMoralitySuffering

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.