ಪಟ್ಟಿಗೆ ಹಿಂತಿರುಗಿ

ಕಗ್ಗ 757 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ । ಭೀಮಸಾಹಸವಿರಲಿ ಹಗೆತನವನುಳಿದು ॥ ನೇಮನಿಷ್ಠೆಗಳಿರಲಿ ಡಂಭಕಠಿಣತೆ ಬಿಟ್ಟು । ಸೌಮ್ಯವೆಲ್ಲಡೆಯಿರಲಿ - ಮಂಕುತಿಮ್ಮ ॥ ೭೫೭ ॥

vyAmOhavillada prEma nirbharavirali । bhIma sAhasavirali hagetanavanuLidu ॥ nEmaniShThegaLirali DambhakaThiNate biTTu । soumyavelleDeyirali - Mankutimma ॥ 757 ॥

ಕನ್ನಡದಲ್ಲಿ ಅರ್ಥ

ಜಗತ್ತಿನಲ್ಲಿ ನಾವು ಅನ್ಯರಿಗೆ ತೋರುವ ಪ್ರೇಮಕ್ಕೆ ವ್ಯಾಮೋಹದ ಲೇಪನವಿರಬಾರದು, ಸಾಹಸದಿಂದ ಕೆಲಸಮಾಡಬೇಕೇ ಹೊರತು ಅದಕ್ಕೆ ದ್ವೇಷದ ಲೇಪನವಿರಬಾರದು, ನಮ್ಮ ಆಚಾರ ವಿಚಾರಗಳಲ್ಲಿ ನಿಯಮ ನಿಷ್ಠೆ ಇರಬೇಕು, ಆದರೆ ಅದಕ್ಕೆ ಡಂಬಾಚಾರದ, ಅತಿಯಾದ ಪ್ರದರ್ಶನದ ಆಸೆಯ ಲೇಪನವಿರಬಾರದು, ಎಂದು ಹೇಳುತ್ತಾ ನಮ್ಮ ಎಲ್ಲ ನಡವಳಿಕೆಯಲ್ಲೂ ಸೌಮ್ಯತೆಯಿರಬೇಕು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

Let there be a lots of love without attachment. Let you have the courage of Bheema without the hatred. Let there be rituals and rules without being just namesake and punishing(or showoff). Let there be pleasantness everywhere. - Mankutimma

ವಿಷಯಗಳು

MoralityLove

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.