ಪಟ್ಟಿಗೆ ಹಿಂತಿರುಗಿ

ಕಗ್ಗ 744 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಅಣಗಿದ್ದು ಬೇಸಗೆಯೊಳ್, ಎದ್ದು ಮಳೆ ಕರೆದಂದು । ಗುಣಿಯೆನದೆ ತಿಟ್ಟೆನದೆ ಸಿಕ್ಕಿದೆಡೆ ಬೆಳೆದು ॥ ಉಣಿಸನೀವನು ದನಕೆ, ತಣಿವನೀವನು ಜಗಕೆ । ಗುಣಶಾಲಿ ತೃಣಸಾಧು - ಮಂಕುತಿಮ್ಮ ॥ ೭೪೪ ॥

aNagiddu bEsageyoL, eddu maLe karedandu । guNiyenade tiTTenade sikkideDe beLedu ॥ uNisanIvanu danake, taNivanIvanu jagake । guNashAli tRuNasAdhu - Mankutimma ॥ 744 ॥

ಕನ್ನಡದಲ್ಲಿ ಅರ್ಥ

ಬೇಸಿಗೆಯಲ್ಲಿ ಒಣಗಿ ಮತ್ತೆ ಮಳೆ ಬಂದಾಗ ಚಿಗುರಿ, ಹಳ್ಳವೆನ್ನದೆ ಗುಡ್ಡವೆನ್ನದೆ ಎಲ್ಲಕಡೆ ಹರಡಿಕೊಂಡು, ದನಗಳಿಗೆ ಆಹಾರವಾಗಿ ಜಗತ್ತಿಗೆ ತಂಪನ್ನೀಯುವ ಗುಣವನ್ನು ಹೊಂದಿರುವ ‘ತೃಣ’ , ಎಂದರೆ ಹುಲ್ಲು ಬಹಳ ಸಾಧು ಎಂದು ಹೇಳುತ್ತಾ, ಸದ್ದಿಲ್ಲದೇ ಜಗತ್ತಿನಲ್ಲಿ ಉಪಯುಕ್ತ ಜೀವನವನ್ನು ಮತ್ತು ಅನ್ಯರಿಗೆ ಸಂತಸವನ್ನು ಕೊಡುವ ಬಗೆಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

It hides during summer. When rains gives it a call, it comes out. It does not mind whether it is a pit or the banks of a stream. It just grows wherever it can. It gives food to the cows and coolness to mankind. Grass is like a saint with great qualities. - Mankutimma

ವಿಷಯಗಳು

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.