ಪಟ್ಟಿಗೆ ಹಿಂತಿರುಗಿ

ಕಗ್ಗ 743 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಎಲ್ಲ ನಾಶನವೆಲ್ಲ ಕಾಲವಶವಾದೊಡಂ । ಕ್ಷುಲ್ಲಕನು ನರನಾದೊಡಂ ಲಾಲನಿದಿರೊಳ್ ॥ ಉಲ್ಲಾಸವೇ ಧರ್ಮ; ಕೊಲ್ಲಿಪನೆ ಬೆಳೆಯಿಪನು । ಹುಲ್ಲೊಣಗಿ ಬೆಳೆವುದಲ? - ಮಂಕುತಿಮ್ಮ ॥ ೭೪೩ ॥

ella nAshanavella kAlavashavAdoDam । kShullakanu naranu aadoDam kAlana idiroL ॥ ullAsave dharma; kollipane beLeyipanu । hullu oNagi beLevudala? - Mankutimma ॥ 743 ॥

ಕನ್ನಡದಲ್ಲಿ ಅರ್ಥ

ಭೂಮಿಯ ಮೇಲಿನ ಹುಲ್ಲು, ಪ್ರಕೃತಿಯ ಕಾರಣದಿಂದ ಚಿಗುರಿ, ಪ್ರಕೃತಿಯ ಕಾರಣದಿಂದಲೇ ಒಣಗಿ ನಾಶವಾದರೂ ಮತ್ತೆ ಪ್ರಕೃತಿಯ ಕಾರಣದಿಂದಲೇ ಚಿಗುರುವಂತೆ ಜಗತ್ತಿನ ಎಲ್ಲವೂ ಕಾಲ ವಶವಾಗಿ ನಾಶವಾಗುತ್ತದೆಯೆಂದಾದರೆ, ನಾಶಮಾಡುವವನು ಮತ್ತು ಸೃಷ್ಟಿಕರ್ತನೂ ಒಬ್ಬನೇ ಎಂದಾದರೆ, ಪ್ರಕೃತಿ ಮತ್ತು ಕಾಲನೆದುರು ಬಹಳ ಬಲಹೀನರಾಗಿ, ಅಲ್ಪರಾಗಿ ಕಾಣುವ ಮನುಷ್ಯರು, ಬದುಕುವಾಗ ‘ಆನಂದ’ ದಿಂದ ಇರುವುದೇ ಧರ್ಮ.ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

It is true that everything gets destroyed in time. Everything is controlled by time. Man is truly insignificant when compared to Time. But in the little time one lives, it is his duty to be happy. There is one reson to be happy too. The same Time that destroys you, also makes your prosper. Just like grass dries up, and again grows back. - Mankutimma

ವಿಷಯಗಳು

Duty

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.