ಪಟ್ಟಿಗೆ ಹಿಂತಿರುಗಿ

ಕಗ್ಗ 726 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ನಲಿಸುವೊಲಿಸುವ, ಕೆಣಕಿ ಕಾಡಿಸುವ ಮುಳಿಯಿಸುವ । ಕೆಳೆ ನಂಟು ಹಗೆ ಕಲಹ ಕುಹಕದೋಲೆಗಳಂ ॥ ಹಲಬರಿಗೆ ಹಂಚಿ ಬಾರೆಂದು ವಿಧಿ ನೇಮಿಸಿಹ । ಇಳೆಯಂಚೆಯಾಳು ನೀಂ - ಮಂಕುತಿಮ್ಮ ॥ ೭೨೬ ॥

nalisi olisuva, keNaki kADisuva muLiyisuva । keLe nanTu hage kalaha kuhakada OlegaLam ॥ halabarige hanchi bArendu vidhi nEmisiha । iLeya ancheyALu nIm - Mankutimma ॥ 726 ॥

ಕನ್ನಡದಲ್ಲಿ ಅರ್ಥ

ಸಂತೋಷಗೊಳಿಸುವ, ರಮಿಸುವ, ಕೆಣಕಿ ಕಾಡಿಸುವ, ಕೋಪಗೊಳ್ಳುವ, ಸ್ನೇಹ, ಬಂಧುತ್ವ, ದ್ವೇಷ, ಕಿತ್ತಾಟ ಕುಹಕ ಭಾವಗಳನ್ನು ಹೊತ್ತ ಹಲವಾರು ಒಲೆಗಳನ್ನು ಹಲವರಿಗೆ ಹಂಚಿ ಬಾರೆಂದು ವಿಧಿ ಕಳುಹಿಸಿಹ ಅಂಚೆಯ ಆಳು(post man) ನೀನು ಎಂದು ಹೇಳುತ್ತಾ, ನೀ ಸೂಸುವ ಭಾವಗಳೆಲ್ಲಾ ಆ ವಿಧಿಯ ನಿರ್ದೇಶನದಂತೆ ನಡೆಯುತ್ತದೆ, ನೀನು ಕೇವಲ ನಿಮಿತ್ತ ಮಾತ್ರ ಎನ್ನುವಂತಹ ವಿಚಾರವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

You are the mail man that Fate has sent to earth to deliver various news to other people. The letters may entertain, placate, provoke, trouble, anger, friendship, kinship, hatred, fight, conspiracy to the recipient. You are just a messenger. - Mankutimma

ವಿಷಯಗಳು

DeathFateSufferingNatureSocietyWar

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.