ಪಟ್ಟಿಗೆ ಹಿಂತಿರುಗಿ

ಕಗ್ಗ 725 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಕಡಲ್ಗಳೊಂದಾದೊಡಂ, ಪೊಡವಿ ಹಬೆಯಾದೊಡಂ । ಬಿಡದಿರೊಳನೆಮ್ಮದಿಯ, ಬಿಡು ಗಾಬರಿಕೆಯ ॥ ಕಡಲ ನೆರೆ ತಗ್ಗುವುದು, ಪೊಡವಿಧೂಳಿಳಿಯುವುದು । ಗಡುವಿರುವುದೆಲ್ಲಕಂ - ಮಂಕುತಿಮ್ಮ ॥ ೭೨೫ ॥

kaDalgaLu ondAdoDam, poDavi habeyAdoDam । biDadiru oLa nemmadiya, biDu gAbarikeya ॥ kaDala nere tagguvudu, poDavi dhOL iLiyuvudu । gaDuvu iruvudu ellakam - Mankutimma ॥ 725 ॥

ಕನ್ನಡದಲ್ಲಿ ಅರ್ಥ

ಕಡಲುಗಳೆಲ್ಲಾ ಅಲೆಯದ್ದು ಉಕ್ಕಿ ಒಂದಾದರೂ, ಧರೆ ಕಾದು ಹಬೆಯಾಗಿ ಧೂಳೆದ್ದರೂ, ನೀನು ನಿನ್ನ ಅಂತರಂಗದ ನೆಮ್ಮದಿಯನ್ನು ಬಿಡ ಬೇಡ ಏಕೆಂದರೆ ಉಕ್ಕುವ ಸಮುದ್ರ ಶಾಂತವಾಗುತ್ತದೆ ಧರೆಯಮೇಲೆ ಎದ್ದ ಧೂಳೆಲ್ಲ ಮತ್ತೆ ಭೂಮಿಗಿಳಿದು, ಶಾಂತವಾಗುತ್ತದೆ. ಗಾಬರಿಯ ಬಿಡು, ಎಲ್ಲಕ್ಕೂ ಒಂದು ಸಮಯವಿರುತ್ತದೆ, ಆ ಸಮಯಕ್ಕಾಗಿ ಶಾಂತವಾಗಿ ನಿರೀಕ್ಷಿಸು ಎನ್ನುವಂತೆ ಬದುಕಿನ ಏರಿಳಿತಗಳನ್ನು ನೋಡುವ ಮತ್ತು ಅನುಭವಿಸುವ ಬಗೆ ಮತ್ತು ಜೀವನದಲ್ಲಿ ತಾಳ್ಮೆಯನ್ನು ವಹಿಸಬೇಕಾದ ಅವಶ್ಯಕತೆಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

Even if the floods cause the seas to unite (drowning the land in between). Even if the forest is covered in fog. Do not let go of your inner tranquility. Do not feel anxious. The seas will recede. The fog will clear up. There is an end to everything - good or bad. - Mankutimma

ವಿಷಯಗಳು

DeathMoralityDetachmentPeace

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.